ಮೂಡಿಗೆರೆ : ಸಿದ್ದಾರ್ಥ್ ಅವರು ನಮ್ಮ ಮಲೆನಾಡಿನ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ ದೇವರು : ಗುರುದತ್…

372
firstsuddi

ಮೂಡಿಗೆರೆ : ಉದ್ಯಮಿ ಕಾಫಿ ಕಿಂಗ್ ಸಿದ್ದಾರ್ಥ್ ನಿಧನ ಹಿನ್ನೆಲೆ, ಎಲ್ಲೆಡೆ ಸಿದ್ದಾರ್ಥ್ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ. ಸಿದ್ದಾರ್ಥ್ ಅಭಿಮಾನಿಯೊಬ್ಬರು ತಾಲ್ಲೂಕಿನ ಹನುಮನಹಳ್ಳಿಯ ಗುರುದತ್ ಎಂಬುವವರು ತಮ್ಮ ಕಾಫಿ ತೋಟಕ್ಕೆ ಸಿದ್ದಾರ್ಥ್ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಗುರುದತ್ ಅವರು ಸಿದ್ದಾರ್ಥ್ ಅಣ್ಣ ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ, ನಮ್ಮ ಮಲೆನಾಡಿನ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ ದೇವರು. ಹಾಗೂ ಡಿ.ಕೆ. ತಾರಾದೇವಿ ಅವರು ಸಚಿವರಾಗಿದ್ದಾಗ ಕಾಫಿ ಬೋರ್ಡಿನ ನಿಯಂತ್ರಣದಲ್ಲಿ ಇದ್ದ ಕಾಫಿ ಮಾರುಕಟ್ಟೆಯನ್ನು ರದ್ದು ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ಸಣ್ಣ ಕಾಫಿ ಬೆಳೆಗಾರರಿಗೆ ಉಪಯೋಗವಾಗುವಂತಹ ಕೆಲಸ ಮಾಡಿದ್ದು, ಹಾಗೂ ಕಾಫಿ ಕ್ಷೇತ್ರದಲ್ಲಿ ಕಾಫಿ ಡೇ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಕಾಫಿ ಕ್ಷೇತ್ರದಲ್ಲಿ ದೇಶ ವಿದೇಶದಲ್ಲಿ ಬೆಳೆಗಾರರಿಗೆ ಹಾಗೂ ಕಾಫಿ ಉದ್ಯಮಕ್ಕೆ ಗೌರವ ತಂದುಕೊಟ್ಟಿದ್ದು ಸಿದ್ದಾರ್ಥ್ ಅವರು ಎಂದರು.