ಮೂಡಿಗೆರೆ : ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂವಿಧಾನ ದಿನಾಚರಣೆಯ ಸುತ್ತೋಲೆಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ವಿವಾಧಾತ್ಮಕ ಹೇಳಿಕೆ ಖಂಡಿಸಿ ಇಂದು ಮೂಡಿಗೆರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು. “ಕೋರಮಂಗಲದ ಸಿಎಂಸಿಎ ಎಂಬ ಖಾಸಗಿ ಸಂಸ್ಥೆ ತಯಾರಿಸಿದ ಕೈಪಿಡಿಯಲ್ಲಿ ಬೇರೆ ಬೇರೆ ಸಮಿತಿಗಳು ಬರೆದಂತದ್ದನ್ನು ನೋಡಿ ಅವುಗಳನ್ನು ಒಟ್ಟುಗೂಡಿಸಿ ನಮ್ಮ ಸಂವಿಧಾನದ ಅಂತಿಮ ಕರುಡನ್ನು ತಯಾರಿಸಿರುವುದು ಡಾ. ಬಿ.ಆರ್ ಅಂಬೇಡ್ಕರ್ ಅವರ ಕಾರ್ಯವಾಗಿತ್ತು. ಅವರು ಕರುಡು ಸಮಿತಿಯ ಅಧ್ಯಕ್ಷರಾಗಿದ್ದರು ಎಂದು ಸುತ್ತೋಲೆಯಲ್ಲಿ ಬರೆಯಲಾಗಿತ್ತು. ಇದನ್ನು ಖಂಡಿಸಿದ ಪ್ರತಿಭಟನಾಕಾರರು ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಯನ್ನು ಅಮಾನತು ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ್ ಹೊಸಕೆರೆ, ಕಾಂಗ್ರೆಸ್ ಮುಖಂಡರಾದ ಅನಂತ್, ಪ್ರಭಾಕರ್ ಬಿನ್ನಾಡಿ, ರತನ್ ಊರುಬಗೆ, ಬಿ.ಎಸ್.ಪಿ ಮುಖಂಡರಾದ ಲೋಕುವಳ್ಳಿ ರಮೇಶ್, ಮಂಜಯ್ಯ, ರಾಮು ಛತ್ರಮೈದಾನ ಭಾಗಿಯಾದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಸುತ್ತೋಲೆಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ವಿವಾಧಾತ್ಮಕ ಹೇಳಿಕೆ ಖಂಡಿಸಿ ಬೃಹತ್...










