ಒಂದು ಮತ ಆಗಲಿ, ಒಂದು ಲಕ್ಷ ಮತವಾಗಲಿ ಗೋಕಾಕ್ ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ : ರಮೇಶ್ ಜಾರಕಿಹೊಳಿ.

233
firstsuddi

ಬೆಳಗಾವಿ : ಲಖನ್ ಜಾರಕಿಹೊಳಿ ಇನ್ನು ಮುಂದೆ ನನ್ನ ಸಹೋದರನಲ್ಲ. ಅವನು ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಕಿಡಿಕಾರಿದ್ದಾರೆ. ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಜೊತೆ ಸೇರಿ ಈಗಾಗಲೇ ಓರ್ವ ಸಹೋದರ ಭೀಮಶಿ ಹಾಳಾಗಿದ್ದಾನೆ. ಇದನ್ನು ನೋಡಿಯೂ ಈಗಾ ಲಖನ್ ಜಾರಕಿಹೊಳಿ ಸತೀಶ್ ಜೊತೆ ಹೋಗಿದ್ದಾನೆ. ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ. ಹೀಗಾಗಿ ಲಖನ್ ಡಿ.5ರ ವರೆಗೂ ನನ್ನ ತಮ್ಮನಲ್ಲ ನನ್ನ ವಿರೋಧಿ ಎಂದರು. ನಮ್ಮ ವಿರೋಧಿಗಳು ನನ್ನನ್ನು ಕಾನೂನಿನ ಚೌಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿ ನಾನು ಬಿಜೆಪಿ ಪಕ್ಷ ಸೇರುವ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿರಲಿಲ್ಲ. ನಮ್ಮ ವಿರೋಧಿಗಳು ಕುತಂತ್ರ ಮಾಡಿ ನನ್ನ ಸೋಲಿಸಬಹುದು. ಆದರೆ ದೇವರ ದಯೆ ನನ್ನ ಮೇಲೆ ಇದೆ. ಒಂದು ಮತ ಆಗಲಿ, ಲಕ್ಷ ಮತವಾಗಲಿ ಗೋಕಾಕ್ ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ ಎಂದರು.