ಮೂಡಿಗೆರೆ : ಸೃಜನ ಶೀಲ ಬದುಕು ಪ್ರಾರಂಭವಾಗುವುದೇ ಗ್ರಾಮಗಳಿಂದ : ಡಾ|| ಜಿ.ಭೀಮೇಶ್ವರ ಜೋಷಿ

153
Firstsuddi

ಕಳಸ : ಸೃಜನ ಶೀಲ ಬದುಕು ಪ್ರಾರಂಭವಾಗುವುದೇ ಗ್ರಾಮಗಳಿಂದ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ಹೇಳಿದರು.

ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ನಡೆದ ಗ್ರಾಮೀಣ ಜೀವನ-ದೃಷ್ಠಿಕೋನಗಳು, ನಿರೂಪಣೆಗಳು ಮತ್ತು ಸವಾಲುಗಳು ಎಂಬುದರ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರ್ಣ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಎಲ್ಲಿಯ ವರೆಗೆ ಅತ್ಯಂತ ಸಮರ್ಪಕವಾಗಿ ವಿಶಾಲವಾದಂತ ದೃಷ್ಠಿಕೋನದಿಂದ ಗ್ರಾಮಗಳು ತನ್ನ ಅಸ್ತಿತ್ವವನ್ನು ಇರುವಿಕೆ ಮತ್ತು ಬೆಳವಣಿಗೆಯನ್ನು ಬೆಳೆಸುವ ಅವಕಾಶವನ್ನು ನಿಂತ ನೀರಾಗದೆ ಅದನ್ನು ಉಜ್ವಲವಾಗಿ ಬೆಳೆಸುವ ಕಾರ್ಯಕ್ಕೆ ಸಾಗಿಸುವ ಹಾದಿಯನ್ನು ಗಟ್ಟಿ ಮಾಡುವ ವ್ಯವಸ್ಥೆ ಆಗುತ್ತದೋ ಅಲ್ಲಿವರೆಗೆ ದೇಶದ ಅಸ್ತಿತ್ವದ ಅಪಾಯವಾಗುವುದಿಲ್ಲ.

ಜೀವನದ ಸ್ವರೂಪವನ್ನು ಅತ್ಯಂತ ಪ್ರೀತಿಯಿಂದ, ಸೌಹಾರ್ದತೆಯಿಂದ, ವಿಶಾಲವಾದ ಮನಸ್ಸಿನಿಂದ ಉತ್ತಮವಾದ ದೃಷ್ಠಿಕೋನದಿಂದ ನೋಡುವುದನ್ನು ಗ್ರಾಮೀಣ ಜೀವನದಲ್ಲಿ ಕಾಣಬಹುದು. ಪಟ್ಟಣದಲ್ಲಿ ಜೀವನ ನಡೆಸಬೇಕಾದರೆ ಹರಸಹಾಸ ಮಾಡಬೇಕಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಅಂತಹ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಿದರು.

ಮಂಗಳೂರು ನೆಹರು ಅಧ್ಯಯನ ಕೇಂದ್ರದ ಪ್ರೋಪೆಸರ್ ರಾಜರಾಂ ತೋಲ್ಪಾಡಿ ಮಾತನಾಡಿ ಗಾಂಧೀಜಿ ಆಧುನಿಕತೆಯ ಒಂದು ಬಾಗವಾಗಿದ್ದರು. ನಮ್ಮ ಆದುನಿಕತೆಯ ತಂತ್ರಜ್ಞಾನಗಳು ಶರವೇಗದಲ್ಲಿ ಓಡುತ್ತಿರುವುದರಿಂದ ಗ್ರಾಮೀಣತೆಯನ್ನು ಉಳಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಆದ್ದರಿಂದ ಗ್ರಾಮೀಣ ಬದುಕಿನ ವಿಶೇಷತೆಗಳು ಯಾವುದು ಅದನ್ನು ನಮ್ಮ ಬದುಕಿನಲ್ಲಿ ಕಂಡುಕೊಳ್ಳಬೇಕು ಎಂದು ಹೇಳಿದರು.

ವಿಜಾರ ಸಂಕಿರಣದಲ್ಲಿ ವಿವಿಧ ಕಾಲೇಜಿನ ಮತ್ತು ವಿಶ್ವವಿದ್ಯಾಲಯಗಳಿಂದ 44 ಮಂದಿ ಅಭ್ಯರ್ಥಿಗಳು ಬಾಗವಹಿಸಿ ತಮ್ಮ ವಿಚಾರವನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲೇಜಿನ ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ವಹಿಸಿಕೊಂಡಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಪ್ರಸಿದ್ಧ ಜೈನ್, ವಿಚಾರ ಸಂಕಿರಣದ ಸಂಘಟಕ ವಿಶುಕುಮಾರ್, ಅಭಿವೃದ್ಧಿ ಸಮಿತಿ ಸದಸ್ಯರಾದ ಬಾಲಕೃಷ್ಣ ಪ್ರಭು, ಪ್ರದೀಪ್ ಕಡೇಪಾಲ್ ಇದ್ದರು.