ಕೊಟ್ಟಿಗೆಹಾರ : ಹಲವು ತಲೆಮಾರುಗಳಿಂದ ದಾಟಿಕೊಂಡ ಬಂದ ಹಿರಿಯರ ಬದುಕಿನ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಮಗ್ಗಲಮಕ್ಕಿ ಗ್ರಾಮದ ಹಿರಿಯರಾದ ಲಕ್ಷ್ಮಣಗೌಡ ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅವರ ಮನೆಯಲ್ಲಿ ಕಸಾಪ ವತಿಯಿಂದ ನಡೆದ ಕಾಳೆಗೌಡ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ಹಿನ್ನಲೆಯಲ್ಲಿ ಬಂದ ಕಾಳೆಗೌಡರು ಸಮಾಜದೊಡನೆ ಉತ್ತಮ ಸಂಬಂಧ ಹೊಂದಿದ್ದರು. ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ಕಾಯಗಳಲ್ಲಿ ತೊಡಗಿಕೊಂಡು ಸಮಾಜಮುಖಿಯಾದ ಬದುಕನ್ನು ಬಾಳಿದವರು ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಮಾತನಾಡಿ ಹಿರಿಯರಾದ ಕಾಳೆಗೌಡ ಅವರು ಹಿರಿಯ ಕಿರಿಯರೊಂದಿಗೆ ಆತ್ಮೀಯವಾಗಿದ್ದವರು. ಬದುಕಿನ ಏರಿಳಿತಗಳನ್ನು ಸಮನಾಗಿ ಕಂಡು ಬದುಕಿದವರು ಎಂದರು.
ಮೀನುಗಾರಿಕಾ ವಿವಿಯ ನಿರ್ದೇಶಕರಾದ ದೀಪಕ್ ದೊಡ್ಡಯ್ಯ ಮಾತನಾಡಿ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿದರೆ ಆ ಮಕ್ಕಳಿಂದ ಹೆತ್ತವರಿಗೂ ಹೆಸರು ಬರುತ್ತದೆ. ಸಾರ್ಥಕ ಬದುಕನ್ನು ಬದುಕಿದ್ದ ಕಾಳೆಗೌಡ ಅವರ ಬದುಕು ಎಲ್ಲರಿಗೂ ಪ್ರೇರಣೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್ ಅಶೋಕ್, ಕಾರ್ಯದರ್ಶಿ ಲಕ್ಷ್ಮಣಗೌಡ, ಬಣಕಲ್ ಹೋಬಳಿ ಕಸಾಪ ಅಧ್ಯಕ್ಷ ವಸಂತ್ ಹಾರ್‍ಗೋಡು, ಎಂ.ಎಸ್, ನಾಗರಾಜ್, ಹಾ.ಬಾ ನಾಗೇಶ್, ಬಕ್ಕಿ ಮಂಜು, ಭಕ್ತೇಶ್, ಮಂಜುನಾಥ್, ಸಂಜಯಗೌಡ, ನರೇಂದ್ರಗೌಡ, ಚಂದ್ರೇಶ್, ಮುಂತಾಧವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಹಿರಿಯರ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ : ಲಕ್ಷ್ಮಣಗೌಡ.










