ಮೂಡಿಗೆರೆ : ಹ್ಯಾಂಡ್ ಪೋಸ್ಟ್ ಗ್ರೀನ್ ಎಲೆಕ್ಟ್ರಿಕಲ್ಸ್ ಮಾಲೀಕರಾದ ಅಬ್ದುಲ್ ಕಾದರ್ (ಮೊಣಕ್ಕ) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ವಾರದ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.
ಅಬ್ದುಲ್ ಕಾದರ್ ಅವರಿಗೆ ಸುಮಾರು 67 ವರ್ಷ ವಯಸ್ಸಾಗಿತ್ತು. ಇಂದು ತಮ್ಮ ಹುಟ್ಟೂರಾದ ಉಡುಪಿ ಜಿಲ್ಲೆಯ ಕಾನಂಗಾರ್ ಗ್ರಾಮದ ಹೆಜಮಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಇವರು ವಾಣಿಜ್ಯೋಧ್ಯಮದ ಜೊತೆ ಜೊತೆಗೆ ಸಾಮಾಜಿಕ ಸೇವೆಯಲು ತಮ್ಮನ್ನು ತಾವೂ ತೊಡಗಿಸಿಕೊಂಡಿದ್ದರು.
ಸಂತಾಪ : ಮೂಡಿಗೆರೆ ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕ ಬಿ.ಬಿ. ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜೀತ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಬಿದಿರಹಳ್ಳಿ ಜಯರಾಂ, ಎಂ.ಎಂ ಲಕ್ಷ್ಮಣ ಗೌಡ , ನಯನ ಮೋಟಮ್ಮ, ಹಾಗೂ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಜನ್ನಾಪುರ ರಘು, ಪತ್ರಕರ್ತರಾದ ರಾಘವೇಂದ್ರ ಕೆಸವಳಲು, ಕಾಫಿ ಬೆಳೆಗಾರರಾದ ಗುರುದತ್ ಹನುಮನಹಳ್ಳಿ, ವ್ಯಾಪರೋಧ್ಯಮಿ ಸುಂದರೇಶ್, ದಯಾನಂದ, ಕೆ.ಕೆ.ರವಿ, ಕರವಳಿ ಕಾಫಿ ಮಾಲೀಕ ಶರೀಫ್, ಸೆರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.










