ಮೂಡಿಗೆರೆ : ಹ್ಯುಮ್ಯಾನಿಟಿ ಸಂಸ್ಥೆಯ 3ನೇ ವರ್ಷದ ವಾರ್ಷಿಕೋತ್ಸವ ಹಿನ್ನಲೆ ಮ್ಯಾನ್‍ಕೈಂಡ್‍ ಕ್ಲಬ್ ವತಿಯಿಂದ ಬಡಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ…

463
firstsuddi

ಕೊಟ್ಟಿಗೆಹಾರ : ಉಡುಪಿಯ ಹ್ಯುಮ್ಯಾನಿಟಿ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಣಕಲ್‍ನ ಮ್ಯಾನ್ ಕೈಂಡ್‍ಕ್ಲಬ್ ವತಿಯಿಂದ ಬಡಕುಟುಂಬಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.
ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಅವರು ಆಹಾರದ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಾಮಾಜಿಕ ಕಾರ್ಯಗಳಿಗೆ ಸಂಘಟಿತರಾಗಿ ಪ್ರಯತ್ನಿಸಬೇಕು. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವ ಮನಸ್ಸುಗಳನ್ನು ಗುರುತಿಸಿ ಸಂಘಟಿತರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಮ್ಯಾನ್‍ಕೈಂಡ್ ಕ್ಲಬ್ ಸದಸ್ಯರಾದ ಸಾಜೀದ್ ಅವರು ಮಾತನಾಡಿ, ಬಡವರ್ಗದ ಏಳಿಗೆಗೆ ಶ್ರಮಿಸುತ್ತಿರುವ ಹ್ಯುಮ್ಯಾನಿಟಿ ಸಂಸ್ಥೆ, ಅನಾರೋಗ್ಯ ಪೀಡಿತರಾಗಿ ಚಿಕಿತ್ಸೆ ಪಡೆಯಲಾರದವರ ನೆರವಾಗುವುದು, ಸೂರು ಇಲ್ಲದ ಬಡಕುಟುಂಬಗಳಿಗೆ ಸೂರು ನಿರ್ಮಿಸಿಕೊಳ್ಳುವುದು ಸೇರಿದಂತೆ ಬಡವರ್ಗದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಮ್ಯಾನ್‍ಕೈಂಡ್ ಕ್ಲಬ್ ಸದಸ್ಯ ವೆಂಕಟೇಶ್ ಹೆಸ್ಗಲ್ ಅವರು ಮಾತನಾಡಿ ಲಾಕ್‍ಡೌನ್ ಅವಧಿ ಈ ಭಾಗದ ಹಲವಾರು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದ್ದು ಸಂಘ ಸಂಸ್ಥೆಗಳು ಹಾಗೂ ದಾನಿಗಳು ಅವರ ನೆರವಿಗೆ ದಾವಿಸಿ ಸ್ಪಂದಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ಮ್ಯಾನ್‍ಕೈಂಡ್ ಕ್ಲಬ್ ಸದಸ್ಯರಾದ ಪ್ರವೀಣ್ ದಾಸರಹಳ್ಳಿ, ಪ್ರಶಾಂತ್ ಪೂಜಾರಿ, ಪೂರ್ಣೇಶ್, ದೀಖ್ಷಿತ್, ಮಹೇಶ್, ಸಚಿನ್ ಇಂದಿರಾನಗರ, ಅಬ್ದುಲ್ಲಾ, ಪಾಝಿಲ್, ರಜತ್ ಬಾಳೂರು ಮುಂತಾದವರು ಇದ್ದರು.