ಮೈಕ್ರೋ ಫೈನಾನ್ಸ್ ಕಂಪನಿಗಳು ರೌಡಿಗಳನ್ನ ಬಿಟ್ಟು ಹಣ ವಸೂಲಿ: ಡಿ.ಕೆ ಶಿವಕುಮಾರ್.

24

ಬೆಂಗಳೂರು: ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡದಂತೆ ಮುಖ್ಯಮಂತ್ರಿಗಳು ಹಾಗೂ ಸಹಕಾರ ಸಚಿವರು ಈಗಾಗಲೇ ಆದೇಶ ಮಾಡಿದ್ದಾರೆ. ಆದರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸುತ್ತಾರೆ, ಹಣ ವಸೂಲಿ ಮಾಡುತ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಜಾರಿಯಾಗುತ್ತೆ ಸುಗ್ರೀವಾಜ್ಞೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ಮೈಕ್ರೋ ಫೈನಾನ್ಸ್ ಮಸೂದೆ ಜಾರಿ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ನಾವು ಬಿಲ್ ತರ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ಆರೋಗ್ಯ ಸರಿಯಿಲ್ಲ. ಒಂದೆರಡು ದಿನ ವಿರಾಮದ ಬಳಿಕ ಬರ್ತಾರೆ. ಆಮೇಲೆ ಸುಗ್ರೀವಾಜ್ಞೆ ಬಗ್ಗೆ ಕ್ರಮ ಜರುಗಿಸುತ್ತಾರೆ ಎಂದು ತಿಳಿಸಿದರು. ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ಎಲ್ಲೆಡೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಪ್ರಕರಣಗಳು ಬೆಳಕಿಗೆ ಬರ್ತಿದೆ. ಈಗಾಗಲೇ ಮುಖ್ಯಮಂತ್ರಿಗಳು, ಸಹಕಾರ ಸಚಿವರು ಕಿರುಕುಳ ನೀಡದಂತೆ ಆದೇಶ ಮಾಡಿದ್ದಾರೆ. ಬಡವರನ್ನ ನಾವು ರಕ್ಷಣೆ ಮಾಡಬೇಕು. ಆದರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸುತ್ತಾರೆ. ಎಲ್ಲ ಪಕ್ಷದ ಕಾರ್ಯಕರ್ತರಿಗೆ ಹೇಳುತ್ತೇನೆ. ಕಿರುಕುಳ ಗಮನಕ್ಕೆ ತರುವಂತೆ ಮನವಿ ಮಾಡುತ್ತೇನೆ. ಪ್ರತಿ ಜಿಲ್ಲಾ ಕಚೇರಿಗಳಿಗೂ ಈ ಕುರಿತು ಹೇಳಿದ್ದೇವೆ. ಎಸ್‍ಪಿಗಳೊಂದಿಗೂ ಸಭೆ ಮಾಡುತ್ತೇವೆ. ಸುಗ್ರೀವಾಜ್ಞೆ ಆದಷ್ಟು ಬೇಗ ಜಾರಿಯಾಗುತ್ತೆ ಎಂದು ಹೇಳಿದರು.