ಮೊಬೈಲ್ ಟವರ್ ಡೀಸೆಲ್ ಕಳವು – ಮೂವರ ಬಂಧನ…

101
firstsuddi

ಚಿಕ್ಕಮಗಳೂರು : ಜಮೀನಿನಲ್ಲಿ ಅಳವಡಿಸಿದ್ದ ಜಿಯೋ ಟವರ್ ಜನರೇಟರ್ ರೂಮಿನಲ್ಲಿ ಡಿಸೇಲ್ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಹಾಸನದ ಹೊಸಕೊಪ್ಪಲು ನಿವಾಸಿ ಬೆಂಗಳೂರಿನ ಕೃಷ್ಣ ಕುಮಾರ್, ಹೊಸದುರ್ಗ ತಾಲೂಕು ನೀರಗುಂದಗ್ರಾಮದ ಮದ ಜ್ಞಾನೇಶ್, ಅರಕಲಗೋಡು ತಾಲೂಕಿನ ಮಲ್ಲಪನಹಳ್ಳಿ ಅನುರಾಜು ಎಂದು ಗುರುತಿಸಲಾಗಿದೆ.

ಆರೋಪಿಗಳು ಕಡೂರು ತಾಲೂಕಿನ ಬಂಜೇನಹಳ್ಳಿ ಈಶ್ವರಪ್ಪ ಅವರ ಜಮೀನಿನಲ್ಲಿ ಅಳವಡಿಸಿದ್ದ ಜಿಯೋ ಟವರ್ ಜನರೇಟರ್ ರೂಮಿನ ಬೀಗ ಒಡೆದು ಸುಮಾರು 70 ಲೀಟರ್ ಡಿಸೇಲ್ ಕಳವು ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಕಡೂರು, ಸಖರಾಯಪಟ್ಟಣ ಪಿ ಎಸ್ ಐ ಹರೀಶ್ ನೇತೃತ್ವದ ತಂಡವು ಹಾಸನ ರೈಲ್ವೆ ನಿಲ್ದಾಣ ಸಮೀಪ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

ಬಂಧಿತರಿಂದ ಮಾರುತಿ ಸ್ವಿಫ್ಟ್ ಕಾರು, ರಬ್ಬರ್ ಪೈಪ್, 2 ಬಿಳಿ ಬಣ್ಣದ ಕ್ಯಾನ್ ಗಳು, 35 ಲೀಟರ್ ಡಿಸೇಲ್ ಇರುವ ಮತ್ತೊಂದು ಕ್ಯಾನ್ ವಶಪಡಿಸಿಕೊಳ್ಳಲಾಗಿದೆ.