ಕಲಬುರಗಿ : ಮೊಮ್ಮಗ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಅಜ್ಜನೂ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಬಿರಾಳ ಗ್ರಾಮದಲ್ಲಿ ನಡೆದಿದೆ. ದೇವೇಂದ್ರ(24) ಮೃತ ಮೊಮ್ಮಗ ಹಾಗೂ ಜಟ್ಟಪ್ಪ ಏವೂರ(69) ಮೊಮ್ಮಗನ ಸಾವಿನ ಸುದ್ದಿ ಕೇಳಿ ಆಘಾತದಿಂದ ಮೃತಪಟ್ಟ ಅಜ್ಜ ಎಂದು ಗುರುತಿಸಲಾಗಿದ್ದು, ಟ್ರ್ಯಾಕ್ಟರ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೊಮ್ಮಗ ದೇವೇಂದ್ರ ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಹೀಗಾಗಿ ಹೊಟ್ಟೆನೋವು ತಾಳಲಾಗದೆ ನಿನ್ನೆ ರಾತ್ರಿ ತಮ್ಮ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಷಯ ತಿಳಿದು ಆಘಾತದಿಂದ ಇಂದು ಬೆಳಿಗ್ಗೆ ಅಜ್ಜ ಜಟ್ಟಪ್ಪ ಅವರೂ ಮೃತಪಟ್ಟಿದ್ದು, ದೇವೇಂದ್ರ ಅವರ ಆತ್ಮಹತ್ಯೆ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










