ಗಾಂಧಿನಗರ : ಮೊರ್ಬಿ ಸೇತುವೆ ದುರಂತದಿಂದ ಸುದ್ದಿಯಾಗಿದ್ದ ಗುಜರಾತ್ ರಾಜ್ಯದ ಮೊರ್ಬಿ ಕ್ವೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಳೆದ ಅಕ್ಟೋಬರ್ 30 ರಂದು ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ತೂಗು ಸೇತುವೆ ಕುಸಿದು 135 ಜನರು ಮೃತಪಟ್ಟಿದರು. ಅಪಘಾತ ಸಂಭವಿಸಿದ ಕೂಡಲೇ ಕಾಂತಿಲಾಲ್ ಲೈಫ್ ಟ್ಯೂಬ್ ಧರಿಸಿ ನದಿಗೆ ಹಾರಿ ಹಲವು ಜನರನ್ನು ರಕ್ಷಿಸಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದಾದ ಬಳಿಕ ಪಕ್ಷ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿ ಮೊರ್ಬಿಯಿಂದ ಟಿಕೆಟ್ ನೀಡಿತ್ತು.
ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ 62 ಸಾವಿರಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅಮೃತಿಯಾ 1995 ರಿಂದ 2012ರ ವರೆಗೆ 5 ಬಾರಿ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಮೊರ್ಬಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಜಯಂತಿ ಪಟೇಲ್ ಅವರನ್ನ ಕಣಕ್ಕಿಳಿಸಿದರೆ, ಆಪ್ ಪಂಕಜ್ ರಂಸಾರಿಯಾ ಅವರನ್ನ ಕಣಕ್ಕಿಳಿಸಿತ್ತು.










