ನವದೆಹಲಿ: ಗುಜರಾತ್‌ನ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಕಣಕ್ಕಿಳಿದಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ರಿವಾಬಾ ಜಡೇಜಾ ಅವರು ಜಾಮ್‌ನಗರ ಉತ್ತರ ಕ್ಷೇತ್ರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಮತ ಗಳಿಕೆಯಲ್ಲಿ ಕಾಂಗ್ರೆಸ್ ನ ಭೀಪೇಂದ್ರ ಸಿನ್ಹ ಜಡೇಜಾ ಮೂರನೇ ಸ್ಥಾನ ಗಳಿಸಿದ್ದಾರೆ.
ನನ್ನನ್ನು ಅಭ್ಯರ್ಥಿಯಾಗಿ ಸಂತೋಷದಿಂದ ಸ್ವೀಕರಿಸಿದವರು, ನನಗಾಗಿ ಕೆಲಸ ಮಾಡಿದವರು, ಜನರನ್ನು ತಲುಪಿದವರು ಮತ್ತು ಸಂಪರ್ಕ ಹೊಂದಿದವರು ಅವರೆಲ್ಲರಿಗೂ ನಾನು ಧನ್ಯವಾದಗಳು. ಇದು ನನ್ನ ಗೆಲುವು ಮಾತ್ರವಲ್ಲ ನಮ್ಮೆಲ್ಲರ ಗೆಲುವು ಎಂದು ರಿವಾಬಾ ಜಡೇಜಾ ಗೆಲುವಿನ ಖುಷಿ ಹಂಚಿಕೊಂಡಿದ್ದಾರೆ.










