ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ದೇವಾಲಯಕ್ಕೆ 1.25ಕೆಜಿ ಚಿನ್ನದ ಕಿರೀಟವನ್ನು ಅರ್ಪಿಸಿದ ಅಭಿಮಾನಿ…

564
firstsuddi

ವಾರಣಾಸಿ : ಇಂದು ಪ್ರಧಾನಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೊಬ್ಬರು ವಾರಣಾಸಿಯ ಸಂಕಟ ಮೋಚನ ದೇವಾಲಯಕ್ಕೆ 1.25 ಕೆಜಿ ತೂಕದ ಚಿನ್ನದ ಕಿರೀಟವನ್ನು ಅರ್ಪಿಸಿ ಅಭಿಮಾನವನ್ನು ಮೆರೆದಿದ್ದಾರೆ. ವಾರಣಾಸಿಯ ನಿವಾಸಿ ಅರವಿಂದ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಕಟ್ಟ ಅಭಿಮಾನಿಯಾಗಿದ್ದು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಿ ಜಯಗಳಿಸಬೇಕು ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಹಮತದಿಂದ ಗೆದ್ದು ಎರಡನೇ ಬಾರಿ ಪ್ರಧಾನಿಯಾದರೆ 1.25 ಕೆಜಿ ತೂಕದ ಚಿನ್ನದ ಕಿರೀಟವನ್ನು ನೀಡುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಇಂದು ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅರವಿಂದ್ ಅವರು ವಾರಣಾಸಿಯ ಸಂಕಟ ಮೋಚನ ದೇವಾಲಯಕ್ಕೆ ಭೇಟಿ ನೀಡಿ ಚಿನ್ನದ ಕಿರೀಟವನ್ನು ಅರ್ಪಿಸಿದ್ದಾರೆ.