ಮೋದಿ ಫೋಟೋ ಹಾಕಿದ್ದಕ್ಕೆ ಮುಸ್ಲಿಂ ವ್ಯಕ್ತಿಗೆ ಮನೆ ಮಾಲೀಕನಿಂದ ಬೆದರಿಕೆ…

58
firstsuddi

ಭೋಪಾಲ್ : ಮುಸ್ಲಿಂ ವ್ಯಕ್ತಿಯೋರ್ವ ತಾನೂ ವಾಸವಾಗಿರುವ ಬಾಡಿಗೆ ಮನೆಯಲ್ಲಿ ಮೋದಿ ಫೋಟೋ ಹಾಕಿಕೊಂಡಿದ್ದಕ್ಕೆ ಮನೆ ಮಾಲೀಕ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯೂಸುಫ್ ಮನೆಯಲ್ಲಿ ಮೋದಿ ಫೋಟೋ ಹಾಕಿಕೊಂಡಿದ್ದ. ಆದರೆ, ಮನೆ ಮಾಲೀಕ ಯಾಕೂಬ್ ಆತನ ಮೇಲೆ ಒತ್ತಡ ಹೇರಿ ಫೋಟೋ ತೆಗೆದು ಹಾಕುವಂತೆ ಸೂಚಿಸಿದ್ದಾನೆ. ಇಲ್ಲವಾದರೆ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದನಂತೆ.
ಇದರಿಂದ ಮನನೊಂದಿರುವ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ನಾನು ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದೇನೆ. ಹೀಗಾಗಿ ಮನೆಯಲ್ಲಿ ಅವರ ಫೋಟೋ ಇಟ್ಟಿದ್ದೆ. ಇದನ್ನು ಗಮನಸಿರುವ ಮಾಲೀಕ ನನಗೆ ಬೆದರಿಕೆ ಹಾಕುತ್ತಿರುವುದಾಗಿ ದೂರಿದ್ದಾರೆ.