ಸೌತಾಂಪ್ಟನ್ : ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಆರಂಭಗೊಳ್ಳಬೇಕಿತ್ತು. ಆದರೆ ಮೊದಲ ದಿನವೇ ವರುಣ ಅಡ್ಡಿಪಡಿಸಿದ್ದಾನೆ. ಇಂದು ಬೆಳಗ್ಗೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಟೆಸ್ಟ್ ನ ಮೊದಲ ಸೆಷನ್ ರದ್ಧುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ಈ ಪಂದ್ಯ ನಡೆಯಲಿದ್ದು, 3:30ಕ್ಕೆ ಟಾಸ್ ಮಾಡಬೇಕಾಗಿತ್ತು. ಆದರೆ ಮಳೆ ಶುರುವಾಗಿರುವ ಕಾರಣ ಇದರಲ್ಲಿ ವಿಳಂಬವಾಗಲಿದೆ. ಹೀಗಾಗಿ ಬಹಳ ಕುತೂಹಲದಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ಉಂಟಾಗಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮನ್ಸ್ ನಾಯಕರಾಗಿ ತಮ್ಮ ಮೊದಲ ಐಸಿಸಿ ಟ್ರೋಫಿ ಆಡಲಿದ್ದಾರೆ.










