ಯಾರನ್ನ ಬೇಕಾದರೂ ಅರೆಸ್ಟ್ ಮಾಡಿಕೊಳ್ಳಿ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ : ಡಿ.ಕೆ.ಶಿವಕುಮಾರ್.

56
firstsuddi

ಬೆಂಗಳೂರು : ಯಾರನ್ನ ಬೇಕಾದರೂ ಅರೆಸ್ಟ್ ಮಾಡಕೊಳ್ಳಲಿ. ಬೇಕಾದರೆ ನನ್ನ ಹಾಗೂ ಸಿದ್ದರಾಮಯ್ಯನವರನ್ನ ಇಬ್ಬರನ್ನು ಅರೆಸ್ಟ್ ಮಾಡಲಿ. ಪಕ್ಷದ ಶಾಸಕರನ್ನು ಕೂಡಾ ಅರೆಸ್ಟ್ ಮಾಡಲಿ. ನಾವು ಮೇಕೆದಾಟು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಗೃಹ ಸಚಿವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರ್ಚುವಲ್ ಮಾಡಿಕೊಂಡು ಬರೀ ಶಾಸಕರು, ಎಮ್ಎಲ್ಸಿಗಳನ್ನು ಕರೆದು ಪ್ರಮಾಣವಚನ ಕಾರ್ಯಕ್ರಮವನ್ನು ಅಸೆಂಬ್ಲಿ ಒಳಗಡೆ ಮಾಡಬೇಕಾಗಿತ್ತು. ಯಾವುದು ಇದು ಆಟ ಗೃಹ ಮಂತ್ರಿಗಳೇ ಏನು ಹೆದರಿಸತ್ತಿದ್ದೀರಾ? ಇಂತಹ ಕೊಡ್ಡು ಬೆದರಿಕೆಗಳಿಗೆಲ್ಲಾ ಕಾಂಗ್ರೆಸ್ ಪಾರ್ಟಿಯವರು ಹೆದರುವವರು ಅಲ್ಲ. ಈ ಹೆದರಿಕೆಗಳನ್ನೆಲ್ಲ ಅವರು ತಮ್ಮ ಸ್ವಂತ ಊರಲ್ಲಿ ಇಟ್ಟುಕೊಳ್ಳಲಿ ನಮ್ಮ ಹತ್ತಿರ ಅಲ್ಲ. ನಾನು ಜೈಲಿಗೆ ಹೋಗಲು ಕೂಡಾ ಸಿದ್ಧನಿದ್ದೇನೆ ರಾಜ್ಯದ ಜನತೆಗೊಸ್ಕರ ನಾವು ಈ ಹೋರಾಟ ಮಾಡುತ್ತಿದ್ದೇವೆ. ಎಲ್ಲ ಕಾರ್ಯಕರ್ತರು ಪಾದಯಾತ್ರೆಗೆ ಬರುತ್ತಿದ್ದು ಜನರು ಕೂಡಾ ಪಕ್ಷಾತೀತವಾಗಿ ಬರುತ್ತಾರೆ ಎಂದರು.

ಸರ್ಕಾರ ಸಭೆ ಸಮಾರಂಭಕ್ಕೆ ಅನುಮತಿ ಇಲ್ಲ ಅಂತ ಅಂದವರು ಅಸೆಂಬ್ಲಿ ಒಳಗಡೆ ಸಭೆ ನಡೆಸಬೇಕಿತ್ತು. ಯಾಕೆ ಇಲ್ಲಿ ಎಮ್ ಎಲ್ ಸಿಗಳಿಗೆ ಪ್ರಮಾಣವಚನಕ್ಕೆ ಅವಕಾಶ ಮಾಡಿಕೊಟ್ಟರು. ಸಭೆಗೆ ಇಷ್ಟೊಂದು ಜನರು ಬಂದಿದ್ದು, ಬಿಜೆಪಿಯವರಿಗೆ ಈಗ ಕೊರೊನಾ ಬರುವದಿಲ್ಲವೇ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಇದು ಸಭೆಯಲ್ಲವೆ ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ವಿರೋಧ ಪಕ್ಷದವರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ. ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ರಾಜಕಾರಣಿಗಳು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದುಕೊಳ್ಳಬೇಕು. ಆರೂವರೆ ವರ್ಷ ಅವರು ಅಧಿಕಾರದಲಿದ್ದು ಏನು ಮಾಡಲಿಲ್ಲ. ಈಗ ನೀರಿಗೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಾಮಾನ್ಯವಾಗಿದ್ದ ಸ್ಥಿತಿಯಲ್ಲಿ ಅವರು ಹೋರಾಟ ಮಾಡುವುದಕ್ಕೆ ಪ್ರಜಾತಂತ್ರದ ರೀತಿ ಕೆಲಸ ಮಾಡುವುದಕ್ಕೆ ಅವರಿಗೆ ಎಲ್ಲ ರೀತಿಯ ಹಕ್ಕು ಇದೆ. ಅವನ್ನು ನಾನು ವಿರೋಧಿಸುವುದಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ಅವರು ಜಾಥಾ ಮಾಡುತ್ತೇವೆ ಎಂದರೆ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದರೆ, ಅವರ ಮೇಲೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಾಗುತ್ತದೆ. ಈ ರಾಜಕೀಯವನ್ನು ಜನ ನೋಡುತ್ತಿದ್ದಾರೆ ಎಂದಿದ್ದಾರೆ.