ಕೀವ್ : ರಷ್ಯಾ-ಉಕ್ರೇನ್ ಯುದ್ಧದ ನಡುವೆಯೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ರಾಷ್ಟ್ರವನ್ನು ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆ ಮಾಡುವ ಕುರಿತ ಅರ್ಜಿಗೆ ಸಹಿ ಹಾಕಿದ್ದಾರೆ. ಈ ವೇಳೆ ಅವರು ಹಾನಿಗೊಳಗಾದ ದೇಶಕ್ಕೆ ತಕ್ಷಣದ ಸದಸ್ಯತ್ವವನ್ನು ನೀಡುವಂತೆ ಯುರೋಪಿಯನ್ ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ.
ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಯುರೋಪಿಯನ್ ಒಕ್ಕೂಟದಲ್ಲಿ ಉಕ್ರೇನ್ ಸದಸ್ಯತ್ವಕ್ಕಾಗಿ ಅರ್ಜಿಗೆ ಸಹಿ ಹಾಕಿದ್ದಾರೆ ಎಂದು ಉಕ್ರೇನ್ ಸಂಸತ್ತು ಘೋಷಿಸಿದೆ.
ಉಕ್ರೇನ್ ಗೆ ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸಿ ಯುದ್ಧ ಸಾರಿತ್ತು. ಇದೀಗ ಉಕ್ರೇನ್ ಯುದ್ಧದ ನಡುವೆಯೇ ಸದಸ್ಯತ್ವಕ್ಕೆ ಅರ್ಜಿ ಹಾಕಿರುವುದು ರಷ್ಯಾವನ್ನು ಇನ್ನಷ್ಟು ಕೆರಳಿಸಿದೆ.










