ಯೋಧರ ಭರ್ಜರಿ ಕಾರ್ಯಾಚರಣೆ-ಐವರು ಎಲ್‍ಇಟಿ ಉಗ್ರರ ಸೆರೆ…

165
firstsuddi

ಶ್ರೀನಗರ : ಜಮ್ಮು ಕಾಶ್ಮೀರಾದ ಬದ್ಗಾಂನಲ್ಲಿ ಭಾರತೀಯ ಯೋಧರು ಭರ್ಜರಿ ಕಾರ್ಯಾಚರಣೆ ನಡೆಸಿ ಐದು ಮಂದಿ ಎಲ್‍ಇಟಿ ಉಗ್ರ ಸಂಘಟನೆಯ ಉಗ್ರರನ್ನು ಬಂಧಿಸಿದ್ದಾರೆ. ಬದ್ಗಾಂನ ನರ್ಬಲ್ ಪ್ರದೇಶದಲ್ಲಿ ಕೆಲವು ಶಸ್ತ್ರಸಜ್ಜಿತ ಉಗ್ರರು ಅಡಗಿ ಕುಳಿತಿದ್ದಾರೆ ಎಂದು ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿಯನ್ನು ತಿಳಿದ ಬದ್ಗಾಂನ ಪೊಲೀಸರು ಹಾಗೂ 2 ರಾಷ್ಟ್ರೀಯ ರೈಫಲ್ಸ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಇಮ್ರಾನ್ ರಶೀದ್, ಇಫ್ಫಾನ್ ಅಹಮದ್ ಗ್ಯಾನಿ, ಓವೈಸ್ ಅಹಮದ್, ಮೊಹಸಿನ್ ಖಾದಿರ್ ಹಾಗೂ ಅಬಿದ್ ರಾದರ್ ಎಂಬ ಐವರು ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರ ಬಳಿ ಇದ್ದ ಅಪಾರ ಪ್ರಮಾನದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಾಗೂ ಇವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 101/2020ರ ಅಡಿಯಲ್ಲಿ ಮಗಮ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ