ರಷ್ಯಾದ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ – 7 ಮಕ್ಕಳು ಸೇರಿ 13 ಮಂದಿ ಸಾವು…

52
firstsuddi

ಮಾಸ್ಕೋ : ರಷ್ಯಾದ ಶಾಲೆಯೊಂದರಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ 7 ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ.

ಮಧ್ಯ ರಷ್ಯಾದ ಇಝೆವ್ಸ್ಕ್ ನಗರದ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಗುಂಡಿನ ದಾಳಿ ನಡೆಸಿದ ಬಳಿಕ ಅಪರಿಚಿತ ದಾಳಿಕೋರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಾಳಿಕೋರನು ಮಕ್ಕಳ ಮೇಲೆ ಗುಂಡು ಹಾರಿಸಲು ಮುಂದಾಗುವ ಮುನ್ನ ಶಾಲೆಯಲ್ಲಿನ ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ಗುಂಡಿನ ದಾಳಿಯಲ್ಲಿ ಸುಮಾರು 21 ಮಕ್ಕಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಷ್ಯಾದ ಭದ್ರತಾ ಸಚಿವಾಲಯ ತಿಳಿಸಿದೆ.

ತನಿಖಾಧಿಕಾರಿಗಳ ಪ್ರಕಾರ, ದಾಳಿಕೋರ ನಾಜಿ ಪಂಥದವನಾಗಿದ್ದು, ನಾಜಿ ಚಿಹ್ನೆಗಳು ಮತ್ತು ಬಾಲಾಕ್ಲಾವಾ ಹೊಂದಿರುವ ಕಪ್ಪು ಬಟ್ಟೆಯನ್ನು ಧರಿಸಿದ್ದ. ಯಾವುದೇ ನಿಖರ ಗುರುತಿನ ಚಿಹ್ನೆಗಳು ಸಿಕ್ಕಿಲ್ಲ. ಈತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.