ರಷ್ಯಾ-ಉಕ್ರೇನ್ ಯುದ್ಧ : ರಾಕೆಟ್ ದಾಳಿಗೆ ಉಕ್ರೇನಿಯನ್ ನಟಿ ಸಾವು…

54
firstsuddi

ಕೀವ್ : ರಷ್ಯಾ ಮತ್ತು ಉಕ್ರೇನ್ ಯುದ್ಧ 23ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಯುದ್ಧ ನಿಲ್ಲುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಇದೀಗ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ಖ್ಯಾತ ನಟಿಯೊಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ನಗರದ ವಸತಿ ಕಟ್ಟಡದ ಮೇಲೆ ರಷ್ಯಾ ಸೈನಿಕರು ನಡೆಸಿದ ರಾಕೆಟ್ ಶೆಲ್ ದಾಳಿಯಲ್ಲಿ ಖ್ಯಾತ ನಟಿ ಒಕ್ಸಾನಾ ಶ್ವೆಟ್ಸ್ (67) ಅವರು ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಒಕ್ಸಾನಾ ಶ್ವೆಟ್ಸ್ ಗೆ ಸ್ಥಳೀಯ ಸರ್ಕಾರ ಉಕ್ರೇನ್ ನ ಅತ್ಯುನ್ನತ ಕಲಾತ್ಮಕ ಗೌರವಗಳಲ್ಲಿ ಒಂದಾದ ‘ಉಕ್ರೇನ್ ನ ಗೌರವಾನ್ವಿತ ಕಲಾವಿದೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಿತ್ತು.

ಫೆಬ್ರವರಿ 24 ರಂದು ಉಕ್ರೇನ್ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸಂಘರ್ಷದ ಆರಂಭದಿಂದಲೂ ಉಕ್ರೇನ್ ನಲ್ಲಿ ಸುಮಾರು 600 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಯುಎನ್ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ ಮಾಹಿತಿ ನೀಡಿದೆ.