ರಷ್ಯಾ ದಾಳಿಗೆ ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆಗಳು ಧ್ವಂಸ…

91
firstsuddi

ಕೀವ್ : ರಷ್ಯಾ-ಉಕ್ರೇನ್ ಯುದ್ಧ ಇಂದು 13ನೇ ದಿನವೂ ಮುಂದುವರೆದಿದ್ದು, ರಷ್ಯಾ ದಾಳಿಯಿಂದ ಉಕ್ರೇನ್ ನ 202 ಶಾಲೆ ಮತ್ತು 34 ಆಸ್ಪತ್ರೆಗಳು ಧ್ವಂಸಗೊಂಡಿರುವ ಬಗ್ಗೆ ವರದಿಯಾಗಿದೆ.

ಕೀವ್ ನಗರದ 202 ಶಾಲೆ, 34 ಆಸ್ಪತ್ರೆ ಮತ್ತು 1,500ಕ್ಕೂ ಹೆಚ್ಚು ವಸತಿ ಕಟ್ಟಡಗಳನ್ನು ರಷ್ಯಾ ಸೇನೆ ಕ್ಷಿಪಣಿ, ರಾಕೆಟ್ ದಾಳಿಯ ಮೂಲಕ ಧ್ವಂಸ ಮಾಡಿದೆ. ಅಲ್ಲದೇ ಉಕ್ರೇನ್ ನಲ್ಲಿರುವ 900ಕ್ಕೂ ಅಧಿಕ ವಸತಿ ಕಟ್ಟಡಗಳಲ್ಲಿ ವಿದ್ಯುತ್, ನೀರು ಸಂಪರ್ಕವಿಲ್ಲದೆ ಜನ ಪರದಾಡುತ್ತಿದ್ದಾರೆ. 

ಉಕ್ರೇನ್ ನಲ್ಲಿ ತಮ್ಮ ಸೇನಾ ಕಾರ್ಯಾಚರಣೆ ಆರಂಭವಾದಾಗಿನಿಂದ ಸುಮಾರು 202 ಶಾಲೆಗಳು, 34 ಆಸ್ಪತ್ರೆಗಳು ಮತ್ತು 1500ಕ್ಕೂ ಹೆಚ್ಚು ವಸತಿ ಕಟ್ಟಡಗಳನ್ನು ರಷ್ಯಾದ ಸೇನಾ ಪಡೆಗಳು ಧ್ವಂಸಗೊಳಿಸಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸಹಾಯಕ ಮೈಖೈಲೊ ಪೊಡೊಲ್ಯಕ್ ಹೇಳಿದ್ದಾರೆ.