ರಷ್ಯಾ ವಿರುದ್ಧ ಯುಎನ್‌ಎಸ್‌ಸಿ ನಿರ್ಣಯ – ಮತದಾನದಿಂದ ದೂರ ಉಳಿದ ಭಾರತ.

75
firstsuddi

ನವದೆಹಲಿ : ರಷ್ಯಾದ ಆಕ್ರಮಣಾಕಾರಿ ನೀತಿಯನ್ನು ಖಂಡಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿದ್ದ ನಿರ್ಣಯದಲ್ಲಿ ಮತ ಚಲಾಯಿಸುವುದರಿಂದ ಭಾರತ ದೂರ ಉಳಿದಿದೆ.

ಭಾರತ, ಚೀನಾ, ಯುಎಇ ಈ ಮೂರು ರಾಷ್ಟ್ರಗಳು ಯುಎನ್‌ಎಸ್‌ಸಿ ನಿರ್ಣಯದಿಂದ ದೂರು ಉಳಿದಿವೆ. ಆದರೆ 11 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ. ಈ ವೇಳೆ ರಷ್ಯಾ ತನ್ನ ವಿಟೋ ಅಧಿಕಾರ ಚಲಾಯಿಸಿ ವಿಶ್ವಸಂಸ್ಥೆಯ ನಿರ್ಣಯವನ್ನು ತಡೆದಿದೆ.

ಉಕ್ರೇನ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತವು ವಿಚಲಿತವಾಗಿದೆ. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಇತ್ಯರ್ಥಗೊಳಿಸಲು ಮಾತುಕತೆಯೊಂದೇ ಉತ್ತರವಾಗಿದೆ. ರಷ್ಯಾ ಮತ್ತು ಉಕ್ರೇನ್ ವಿಚಾರದಲ್ಲಿ ರಾಜತಾಂತ್ರಿಕ ಮಾತುಕತೆಯ ಮಾರ್ಗವನ್ನು ಕೈಬಿಟ್ಟಿರುವುದು ವಿಷಾದದ ಸಂಗತಿಯಾಗಿದೆ. ನಾವು ರಾಜತಾಂತ್ರಿಕ ಮಾರ್ಗವನ್ನು ಆಯ್ದುಕೊಳ್ಳಬೇಕು. ಈ ಎಲ್ಲಾ ಕಾರಣಗಳಿಗಾಗಿ, ಭಾರತವು ಈ ನಿರ್ಣಯದಿಂದ ದೂರವಿರಲು ನಿರ್ಧರಿಸಿದೆ ಎಂದು ಭಾರತ ಕಾಯಂ ಪ್ರತಿನಿಧಿಯಾದ ಟಿ ಎಸ್ ತಿರುಮೂರ್ತಿ ತಿಳಿಸಿದ್ದಾರೆ.