ರಸ್ತೆ ಅಪಘಾತದಲ್ಲಿ ಮಲಯಾಳಂ ನಟ ಕೊಲ್ಲಂ ಸುಧಿ ನಿಧನ…

55
firstsuddi

ರಸ್ತೆ ಅಪಘಾತದಲ್ಲಿ ಮಾಲಿವುಡ್ ಕಿರುತೆರೆ- ಹಿರಿತೆರೆಯಲ್ಲಿ ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಕೊಲ್ಲಂ ಸುಧಿ ಅವರು ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.

ತ್ರಿಶೂರ್ ಸಮೀಪ ಮುಂಜಾನೆ 4:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅವರು ವಡಕರಾದಲ್ಲಿ ಕಾರ್ಯಕ್ರಮ ಒಂದನ್ನು ಮುಗಿಸಿ ಮರಳುತ್ತಿದ್ದರು. ಈ ವೇಳೆ ನಟನ ಕಾರು ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ತೀವ್ರವಾಗಿ ಗಾಯಗೊಂಡ ಕೊಲ್ಲಂ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಕಾರು- ಟ್ರಕ್ ನಡುವೆ ಪರಸ್ಪರ ಡಿಕ್ಕಿ ಆಗಿದೆ. ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ಕರೆತರಲಾಯಿತು. ಸುಧಿ ಅವರು ಮೊದಲು ಮೃತಪಟ್ಟರು. ಉಳಿದ ಮೂವರ ಸ್ಥಿತಿ ಚಿಂತಾಜನಕ ಆಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2015ರಲ್ಲಿ ಸುಧಿ ಚಿತ್ರರಂಗಕ್ಕೆ ಬಂದರು. ಸುಧಿ ಅವರು ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಹಾಸ್ಯ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದರು. ಸುಧಿ ಅವರು ಸಿನಿಮಾದಲ್ಲೂ ನಟಿಸಿದ್ದಾರೆ. ‘ಕಟ್ಟಪ್ಪನೆಯಿಲೆ ಹೃತಿಕ್ ರೋಷನ್’, ‘ಆ್ಯನ್ ಇಂಟರ್​ನ್ಯಾಷನಲ್ ಲೋಕಲ್ ಸ್ಟೋರಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸುಧಿ ಸಾವಿಗೆ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.