ರಸ್ತೆ ಅಪಘಾತ : ಪಂಜಾಬಿ ಗಾಯಕ ದಿಲ್ಜಾನ್ ನಿಧನ…

150
firstsuddi

ಚಂಡೀಗಢ : ಪಂಜಾಬಿ ಖ್ಯಾತ ಗಾಯಕ ದಿಲ್ಜಾನ್(31) ಅವರು ಇಂದು ಬೆಳಗಿನ ಜಾವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದಿಲ್ಜಾನ್ ಅವರು ಪ್ರಯಾಣಿಸುತ್ತಿದ್ದ ಕಾರು ಮುಂದಿನ ಟ್ರಕ್‍ಗೆ ಗುದ್ದಿದ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಚಿಕಿತ್ಸೆ ನೀಡಲು ಮುಂದಾಗಿದ್ದರೂ ಕೂಡ ದುರಾದೃಷ್ಟವಶಾತ್ ದಿಲ್ಜಾನ್ ಅವರು ಸಾವನ್ನಪ್ಪಿದ್ದಾರೆ. ದಿಲ್ಜಾನ್ ಅವರು ಅಮೃತಸರದಿಂದ ಕಾರ್ತಾರ್ಪುರದ ತಮ್ಮ ಮನೆಗೆ ಹಿಂದಿರುಗುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.