ರಾಮನಗರ: ರಾಜಕೀಯ ಜಂಜಾಟದ ನಡುವೆ ನಮ್ಮ ಕ್ಷೇತ್ರದ ಜನರಿಗೆ ಹಾಗೂ ನಮ್ಮ ಮನೆಗೆ ಟೈಂ ಕೊಡಲು ಆಗುತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇನ್ನೇನು ಅಧಿವೇಶನಕ್ಕೆ ಹತ್ತು ದಿನ ಬೆಳಗಾವಿಗೆ ಹೋಗಬೇಕು. ಹೀಗಾಗಿ ಜನರ ಕಷ್ಟ ಕೇಳಲು ಕನಕಪುರಕ್ಕೆ ಬಂದಿದ್ದೇನೆ. ಈಗಾಗಲೇ ಸಂಸದರು ಗ್ರಾ.ಪಂ ಮಟ್ಟದ ಜನಸಂಪರ್ಕ ಸಭೆ ನಡೆಸಿದ್ದಾರೆ. ಈ ಹಿಂದೆ ಪ್ರತಿ ಗ್ರಾಮಗಳಿಗೂ ಪ್ರವಾಸ ಮಾಡುತ್ತಿದ್ದೆ.
ಕಳೆದ ಎರಡು ಅವಧಿಯಿಂದ ರಾಜ್ಯ ರಾಜಕೀಯ ಕೆಲಸ ಹೆಚ್ಚಾಗಿದೆ. ಹೀಗಾಗಿ ಕ್ಷೇತ್ರ ಪ್ರವಾಸ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇಂದು ಸಂಜೆಯವರೆಗೂ ಕನಕಪುರದಲ್ಲೇ ಇದ್ದು ಜನರ ಕಷ್ಟ-ಸುಖ ಕೇಳುತ್ತೇನೆ. ಗ್ರಾ.ಪಂ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಈ ಬಗ್ಗೆ ರಾಜ್ಯವ್ಯಾಪಿ ಆದೇಶ ಜಾರಿ ಮಾಡಲಾಗುವುದು ಎಂದರು.










