ರಾಜ್ಯಕ್ಕೆ ಸದ್ಯದಲ್ಲೇ ಲಸಿಕೆ ಲಭ್ಯವಾಗಲಿದೆ : ಸಿಎಂ ಯಡಿಯೂರಪ್ಪ.

151
firstsuddi

ಬೆಂಗಳೂರು : ಇಂದು ಬಸವ ಜಯಂತಿ ಅಂಗವಾಗಿ ನಗರದ ಚಾಲುಕ್ಯ ವೃತ್ತದಲ್ಲಿ ಬಸವಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪನವರು, ವ್ಯಾಕ್ಸಿನ್ ಗಾಗಿ ಗ್ಲೋಬಲ್ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲೇ ಲಸಿಕೆ ಲಭ್ಯವಾಗಲಿದೆ. ಆದಷ್ಟು ಬೇಗ ರಾಜ್ಯಕ್ಕೆ ಲಸಿಕೆ ಬರಲಿದೆ ಎಂದರು.

ಇದೇ ವೇಳೆ ರಂಜಾನ್ ಹಬ್ಬ ಹಾಗೂ ಬಸವ ಜಯಂತಿಯ ಶುಭ ಕೋರಿದ ಸಿಎಂ ಯಡಿಯೂರಪ್ಪನವರು, ಕ್ರಾಂತಿಯೋಗಿ ಎಂದೇ ಜನಜನಿತರಾದ ಬಸವಣ್ಣನವರ ವಚನಗಳ ತಿಳಿನುಡಿಗಳ ಮೂಲಕ ಸಾರ್ಥಕ ಜೀವನ ನಡೆಸೋಣ ಎಂದರು. ಹಾಗೆಯೇ ರಂಜಾನ್ ಹಬ್ಬದ ಶುಭಾಶಯವನ್ನೂ ಕೋರಿ, ಹಿಂದೂ, ಮುಸ್ಲಿಂ, ಕ್ರಿಶ್ಚನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕೋಣ ಎಂದರು.