ರಾಜ್ಯದಲ್ಲಿ ಇಂದಿನಿಂದ 6ರಿಂದ 8ನೇ ತರಗತಿವರೆಗೆ ಶಾಲೆ ಆರಂಭ…

165
firstsuddi

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಆರನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಶಾಲೆಗಳು ಆರಂಭವಾಗುತ್ತಿವೆ. ಈಗಾಗಲೇ ಮೊದಲ ಹಂತವಾಗಿ 9ರಿಂದ 12ನೇ ತರಗತಿಗಳನ್ನು ಯಶಸ್ವಿಯಾಗಿ ಆರಂಭಿಸಿರುವ ಇಲಾಖೆ, ಇಂದಿನಿಂದ ಎರಡನೇ ಹಂತದ ಪ್ರಾಥಮಿಕ ಶಾಲೆಗಳು ಆರಂಭವಾಗಲಿವೆ.

ದಿನ ಬಿಟ್ಟು ದಿನ ಬ್ಯಾಚ್ ಗಳಲ್ಲಿ ತರಗತಿ ಆರಂಭಿಸಲು ಸೂಚನೆ ಹೊರಡಿಸಲಾಗಿದ್ದು, ಶನಿವಾರ, ಭಾನುವಾರ ಎರಡು ದಿನ ಶಾಲೆಗೆ ಸ್ಯಾನಿಟೈಸ್ ಮಾಡಲು ತೀರ್ಮಾನಿಸಲಾಗಿದೆ. 6 ರಿಂದ 7ನೇ ತರಗತಿ ಮಕ್ಕಳಿಗೆ ಬೆಳಗ್ಗೆ 10: 30ರಿಂದ ಮಧ್ಯಾಹ್ನ 1:30ರವರೆಗೆ ತರಗತಿ ನಡೆಸಲಾಗುತ್ತಿದೆ. 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2 ಗಂಟೆಯಿಂದ 4:30ರ ತರಗತಿ ನಡೆಸಲು ಸೂಚಿಸಲಾಗಿದೆ.

ನಿಯಮ ಏನು?
ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯ ಇಲ್ಲ. ಆನ್ ಲೈನ್ ಅಥವಾ ಆಫ್ ಲೈನ್ ಹಾಜರಾತಿ ಕಡ್ಡಾಯ. ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ. ಶೇಕಡಾ 50ರಷ್ಟು ಮಕ್ಕಳೊಂದಿಗೆ ದಿನಬಿಟ್ಟು ದಿನ ತರಗತಿ. ಸೋಮವಾರದಿಂದ ಶುಕ್ರವಾರದವರೆಗೆ ಕ್ಲಾಸ್. ಶಾಲೆ ಸ್ವಚ್ಛತೆಗಾಗಿ ಶನಿವಾರ ಶಾಲೆಗೆ ರಜೆ (ಎಂದಿನಂತೆ ಭಾನುವಾರ ರಜೆ). ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಇಲ್ಲ.