ರಾಜ್ಯದಲ್ಲಿ ಝಿಕಾ ವೈರಸ್ ಆತಂಕ – ಆರೋಗ್ಯ ಇಲಾಖೆಯಿಂದ ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ…

53
firstsuddi

ಬೆಂಗಳೂರು : ರಾಜ್ಯದಲ್ಲಿ ಝಿಕಾ ವೈರಸ್ ಆತಂಕ ಹೆಚ್ಚಾಗಿದ್ದು, ಈ ಸಂಬಂಧ ಎಚ್ಚರಿಕೆ ವಹಿಸಿರುವ ಆರೋಗ್ಯ ಇಲಾಖೆ, ವೈರಸ್ ಗೆ ಚಿಕಿತ್ಸಾ ಕ್ರಮ, ಪರೀಕ್ಷಾ ವಿಧಾನ ಮತ್ತು ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿದೆ.

ಝಿಕಾ ವೈರಸ್ ರೋಗ ಲಕ್ಷಣಗಳೇನು?
ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ ನೋವು

ಝಿಕಾ ವೈರಸ್ ಟೆಸ್ಟಿಂಗ್ ವಿಧಾನ ಹೇಗೆ?
ಇತ್ತೀಚೆಗೆ ಹೊರರಾಜ್ಯ, ಹೊರದೇಶಗಳಿಗೆ ಪ್ರಯಾಣ ಮಾಡಿದ ವ್ಯಕ್ತಿಗಳಿಗೆ ಕಡ್ಡಾಯವಾಗಿ ಝಿಕಾ ವೈರಸ್ ಟೆಸ್ಟ್ ಮಾಡಬೇಕು. ಝಿಕಾ ವೈರಸ್ ಪತ್ತೆಯಾದ ಸುತ್ತಮುತ್ತ ಪ್ರದೇಶದಲ್ಲಿ ಕಡ್ಡಾಯವಾಗಿ ಝಿಕಾ ವೈರಸ್ ಟೆಸ್ಟ್ ಮಾಡಬೇಕು. ಗರ್ಭಿಣಿಯರು ಇರುವ ಪ್ರದೇಶದ ಸುತ್ತಮುತ್ತ ಹೆಚ್ಚು ನಿಗಾ ಇಡಬೇಕು. ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಬೇಕು.

ಝಿಕಾ ವೈರಸ್ ಗೆ ಚಿಕಿತ್ಸಾ ಕ್ರಮ ಹೇಗೆ?
ಝಿಕಾ ವೈರಸ್ ಗೆ ಸಾಮಾನ್ಯ ಮೈಕೈ ನೋವು, ಜ್ವರಕ್ಕೆ ನೀಡುವ ಚಿಕಿತ್ಸೆ ನೀಡಬಹುದು. ಸೌಮ್ಯ ಗುಣಲಕ್ಷಣ ಇರುವ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ಅಗತ್ಯವಿಲ್ಲ. ರೋಗ ಲಕ್ಷಣಗಳಿರುವ ರೋಗಿಗಳಿಗೆ ವೈದ್ಯಕೀಯ ಸಲಹೆ ಪಡೆದುಕೊಂಡೇ ಚಿಕಿತ್ಸೆ ನೀಡಬೇಕು. ಸದ್ಯಕ್ಕೆ ಝಿಕಾ ವೈರಸ್ ಗೆ ವ್ಯಾಕ್ಸಿನ್ ಇಲ್ಲ.