ರಾಮಮಂದಿರ ಜ್ಞಾಪಕಾರ್ಥ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ.

41
firstsuddi

ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರು 
ಬಿಡುಗಡೆಗೊಳಿಸಿದ್ದಾರೆ.

ದೇಗುಲದ ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ಭಗವಾನ್ ರಾಮನ ಕುರಿತಾದ ಅಂಚೆಚೀಟಿಗಳ ಪುಸ್ತಕದ ಬಿಡುಗಡೆಯ ಬಳಿಕ, ಅಂಚೆ ಚೀಟಿಗಳು ಭವಿಷ್ಯದ ಪೀಳಿಗೆಗೆ ಇತಿಹಾಸ ಮತ್ತು ರಾಮಮಂದಿರದ ಕುರಿತಾದ ಐತಿಹಾಸಿಕ ಕ್ಷಣಗಳನ್ನು ತಲುಪಿಸುವ ಮಾಧ್ಯಮಗಳಾಗಿವೆ. ಈ ಅಂಚೆ ಚೀಟಿಗಳು ಕೇವಲ ಕಾಗದದ ತುಣುಕುಗಳು ಅಥವಾ ಕೇವಲ ಕಲಾಕೃತಿಗಳಲ್ಲ. ಅವು ರಾಮಾಯಣದ ಕುರಿತಾದ ತಮ್ಮದೇ ಆದ ವಿಶಿಷ್ಟ ಗುರುತುಗಳನ್ನು ಹೊಂದಿವೆ ಎಂದಿದ್ದಾರೆ.

ಇಂದು ಬಿಡುಗಡೆ ಮಾಡಲಾದ ಅಂಚೆ ಚೀಟಿಗಳಿಂದ ಯುವಕರು ಬಹಳಷ್ಟು ಕಲಿಯುತ್ತಾರೆ. ಅಂಚೆ ಚೀಟಿಯಲ್ಲಿ ರಾಮ್ ಚರಿತ್ ಮಾನಸ್ನ ಶ್ಲೋಕವಿದೆ. ದೇಶಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡುವ ಸೂರ್ಯನ ಚಿತ್ರವಿದೆ. ಅಲ್ಲದೇ ಸರಯು ನದಿಯ ಚಿತ್ರಣವೂ ಇದರಲ್ಲಿದೆ. ಇದರೊಂದಿಗೆ ಭಗವಾನ್ ರಾಮನ, ಪಂಚತಂತ್ರದ ತತ್ತ್ವವನ್ನು ಆಲ್ಬಮ್‍ನಲ್ಲಿ ಚಿಕಣಿ ರೂಪದಲ್ಲಿ ಚಿತ್ರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂಚೆಚೀಟಿಗಳಲ್ಲಿ ರಾಮಮಂದಿರ, ಚೌಪಾಯಿ ಮಂಗಲ್ ಭವನ್ ಮತ್ತು ಅಮಂಗಲ್ ಭವನ್, ಸೂರ್ಯ, ಸರಯೂ ನದಿ ಮತ್ತು ಮಂದಿರದ ಸುತ್ತ ಕಾಣುವ ಶಿಲ್ಪಗಳನ್ನು ನೋಡಬಹುದು. ರಾಮ ಮಂದಿರ, ಭಗವಾನ್ ಗಣೇಶ, ಭಗವಾನ್ ಹನುಮಾನ್, ಜಟಾಯು, ಕೇವತ್ ರಾಜ್ ಮತ್ತು ಮಾ ಶಬರಿ ಒಳಗೊಂಡ 6 ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಮಿನಿಯೇಚರ್ ಶೀಟಿಗೆ ಸೂರ್ಯಕಿರಣಗಳ ಹೊಂಬಣ್ಣದ ಎಲೆ ಮತ್ತು ಚೌಪಾಯಿ ವಿಶಿಷ್ಟ ಮೆರಗನ್ನು ನೀಡುತ್ತವೆ. ಪಂಚಭೂತಗಳೆಂದು ಕರೆಸಿಕೊಳ್ಳುವ ಆಕಾಶ, ಗಾಳಿ, ಅಗ್ನಿ, ಭೂಮಿ ಮತ್ತು ನೀರು ಮೊದಲಾದ ಭೌತಿಕ ಅಂಶಗಳು ಬಗೆಬಗೆಯ ವಿನ್ಯಾಸಗಳಲ್ಲಿ ಪ್ರತಿಫಲಿತಗೊಂಡಿದ್ದು ಸಕಲ ಅಭಿವ್ಯಕ್ತಿಗೆ ಅವಶ್ಯವಾಗಿರುವ ಪಂಚಮಹಾಭೂತಗಳೊಂದಿಗೆ ಅನನ್ಯ ಮತ್ತು ಪರಿಪೂರ್ಣ ಸಾಮರಸ್ಯ ಹೊಂದಿವೆ.

ಬೇರೆ ಬೇರೆ ಸಮುದಾಯಗಳ ಮೇಲೆ ಪ್ರಭು ರಾಮನಿಗಿರುವ ಅಂತಾರಾಷ್ಟ್ರೀಯ ಅಪೀಲನ್ನು ಸ್ಟ್ಯಾಂಪ್ ಪುಸ್ತಕದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಯುಎಸ್, ನ್ಯೂಜಿಲೆಂಡ್, ಸಿಂಗಾಪೂರ್, ಕೆನಡಾ, ಕಾಂಬೋಡಿಯ ಮತ್ತು ವಿಶ್ವಸಂಸ್ಥೆ ಒಳಗೊಂಡಂತೆ 20 ದೇಶಗಳು ಬಿಡುಗಡೆ ಮಾಡಿರುವ ಅಂಚೆಚೀಟಿಗಳನ್ನು 48-ಪುಟಗಳ ಪುಸ್ತಕದಲ್ಲಿ ನೋಡಬಹುದು.