ರಾಷ್ಟ್ರಗೀತೆ ಮತ್ತು ಕವಿ ರವೀಂದ್ರನಾಥ ಠಾಗೋರ್ ಬಗ್ಗೆ ರಾಮಗಿರಿ ಮಹಾರಾಜ್ ವಿವಾದಾತ್ಮಕ ಹೇಳಿಕೆ.

22

ಮುಂಬೈ: ರಾಷ್ಟ್ರಗೀತೆ ಮತ್ತು ಭಾರತದ ಮಹಾನ್ ಕವಿ ರವೀಂದ್ರನಾಥ ಠಾಗೋರ್ ಅವರನ್ನು ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ಟೀಕಿಸಿದ್ದಾರೆ. ಜನ, ಗಣ, ಮನ ಬದಲು ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯಾಗಬೇಕು ಎಂದು ರಾಮಗಿರಿ ಮಹಾರಾಜರು ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ತಿಳಿಸಿದ್ದಾರೆ. ಭವಿಷ್ಯದಲ್ಲಿ ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ನಾವು ಹೋರಾಟ ಮಾಡಬೇಕು ಎಂದು ತಿಳಿಸಿದರು. ರಾಮಗಿರಿ ಮಹಾರಾಜರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಈ ಹಿಂದೆಯೂ ಅವರ ಹೇಳಿಕೆ ವಿವಾದವಾಗಿತ್ತು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ನಾಸಿಕ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಅವರ ವಿರುದ್ಧ ಮಹಾರಾಷ್ಟ್ರದಲ್ಲಿ 60ಕ್ಕೂ ಹೆಚ್ಚು ಎಫ್‍ಐಆರ್‍ಗಳು ದಾಖಲೆಯಾಗಿದ್ದವು. ರಾಷ್ಟ್ರಗೀತೆಯೊಂದಿಗೆ ರಾಮಗಿರಿ ಮಹಾರಾಜರು ಮಹಾಕವಿ ರವೀಂದ್ರನಾಥ ಠಾಗೋರ್ ರನ್ನು ಟೀಕಿಸಲಾಗಿದೆ. ನಾವು ರಾಷ್ಟ್ರಗೀತೆಯನ್ನು ಕೇಳುತ್ತೇವೆ. ಆದರೆ ನಮ್ಮ ರಾಷ್ಟ್ರಗೀತೆಯ ಇತಿಹಾಸ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ, ಆದರೆ ಇಂದು ನಾನು ಸತ್ಯವನ್ನು ಹೇಳಲು ಹೊರಟಿದ್ದೇನೆ. ಬಹುಶಃ ನಿಮಗೆ ಇದರ ಕುರಿತು ಅರಿವಿಲ್ಲ. ರವೀಂದ್ರನಾಥ ಟ್ಯಾಗೋರ್ ಅವರು 1911ರಲ್ಲಿ ಕೋಲ್ಕತ್ತಾದಲ್ಲಿ ಈ ಹಾಡನ್ನು ಹಾಡಿದ್ದರು. ಅಂದು ಭಾರತವು ಸ್ವತಂತ್ರ ರಾಷ್ಟ್ರವಾಗಿರಲಿಲ್ಲ ಎಂದು ಹೇಳಿದರು. ಜಾರ್ಜ್ ವಿ ಅವರನ್ನು ಬೆಂಬಲಿಸಿ ರವೀಂದ್ರನಾಥ ಠಾಗೋರ್ ಅವರು ಹಾಡನ್ನು ಹಾಡಿದ್ದರು ಎಂದು ರಾಮಗಿರಿ ಮಹಾರಾಜ್ ಹೇಳಿದರು. ಜಾರ್ಜ್‍ಗಿ ಅವನು ಬ್ರಿಟಿಷ್ ರಾಜನಾಗಿದ್ದನು. ಆತ ಭಾರತೀಯರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದನು. ರಾಷ್ಟ್ರಗೀತೆ ಭಾರತದ ಜನರಿಗೆ ಅಲ್ಲ. ಆದ್ದರಿಂದ, ಭವಿಷ್ಯದಲ್ಲಿ ನಾವು ಇದಕ್ಕಾಗಿಯೂ ಹೋರಾಡಬೇಕಾಗುತ್ತದೆ. ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯಾಗಬೇಕು ಎಂದು ಹೇಳಿದರು.