ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ : ಮಾಯಾವತಿ.

61
firstsuddi

ಲಕ್ನೋ : ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಬಹುಜನ ಸಮಾಜ ಪಕ್ಷದ (ಬಿಎಸ್ ಪಿ) ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಈ ನಿರ್ಧಾರ ಬಿಜೆಪಿ ಅಥವಾ ಎನ್ ಡಿಎ ಪರವಾಗಿಯೋ ಅಥವಾ ಯುಪಿಎ ವಿರುದ್ಧವಾಗಿಯೋ ತೆಗೆದುಕೊಂಡಿರುವುದಲ್ಲ. ಬದಲಾಗಿ, ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿಸುವುದಕ್ಕೆ ನಮ್ಮ ಪಕ್ಷ ಹಾಗೂ ಅದರ ಚಳುವಳಿಯನ್ನು ಗಮನದಲ್ಲಿಟ್ಟುಕೊಂಡೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವು ಆಯ್ದ ಪಕ್ಷಗಳನ್ನು ಮಾತ್ರ ಕರೆದಿದ್ದರು. ಶರದ್ ಪವಾರ್ ಆಗಲಿ ಮಮತಾ ಬ್ಯಾನರ್ಜಿ ಅವರಾಗಲಿ ಬಿಎಸ್ ಪಿಯನ್ನು ಚರ್ಚೆಗೆ ಆಹ್ವಾನಿಸಿರಲಿಲ್ಲ. ಇದು ಅವರ ಜಾತಿವಾದವನ್ನು ತೋರಿಸುತ್ತದೆ ಎಂದು ಆರೋಪಿಸಿದ್ಧಾರೆ.