ಚಿಕ್ಕಮಗಳೂರು : ಹರಿಯಾಣ ರಾಜ್ಯದ ರೊಹ್ತಕ್‍ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಪೆಂಕಾಕ್ ಸಿಲತ್, ಮಿಕ್ಸ್ ಮಾರ್ಷಲ್ ಆಟ್ರ್ಸ್ ಕ್ರೀಡಾಕೂಟದಲ್ಲಿ ನಗರದ ಬಾಲಕ ಎಂ.ಎಸ್.ಅಮನ್‍ಶ್ರೀವತ್ಸ ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾನೆ.
ನಗರದ ಮಾರ್ಷಲ್ ಆಟ್ರ್ಸ್ ಸಂಸ್ಥೆಯ ಹಾಗೂ ನರ್ಚರ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿರುವ ಎಂ.ಎಸ್.ಅಮನ್‍ಶ್ರೀವತ್ಸ ಹಾಸನ ಜಿಲ್ಲೆ ಕನ್ನಡ ಮತ್ತು ಸಂಸ್ಕø ತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|ಎಂ.ಡಿ.ಸುದರ್ಶನ್ ಹಾಗೂ ಐಡಿಎಸ್‍ಜಿ ಕಾಲೇಜಿನ ಪ್ರಾದ್ಯಾಪಕಿ ಡಾ|ಎಚ್.ಎಲ್.ದಿವ್ಯ ಅವರ ಪುತ್ರನಾಗಿದ್ದಾನೆ.










