ರೆಪೋ ದರದಲ್ಲಿ ಯಥಾಸ್ಥಿತಿ ಮುಂದುವರೆಸಲು ಆರ್​ಬಿಐ ನಿರ್ಧಾರ…

66
firstsuddi

ನವದೆಹಲಿ : ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.

ಇಂದು ವಿತ್ತೀಯ ನೀತಿ ಪ್ರಕಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಪ್ರಸ್ತುತ ರೆಪೋ ದರ ಈ ಹಿಂದಿನ ಶೇ 6.5 ದರದಲ್ಲೇ ಮುಂದುವರೆಯಲಿದೆ ಹಾಗೂ ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಇದನ್ನು ಮರುಪರಿಶೀಲಿಸಲು ಆರ್​ಬಿಐ ಸಿದ್ಧವಾಗಿದೆ ಎಂದರು. ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಭೆಯ ನಂತರ ಇದನ್ನು ಪ್ರಕಟಿಸಲಾಗಿದೆ.

ಇನ್ನು ರೆಪೋ ದರದಲ್ಲಿ ಯಥಾಸ್ಥಿತಿ ಮುಂದುವರಿಸಲು ಆರ್​ಬಿಐ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಸರ್ಕಾರಿ ಬಾಂಡ್ ನ ಮೌಲ್ಯ ಕುಸಿದಿದೆ. ಶೇ. 7.2857ರಷ್ಟಿದ್ದ ಬಾಂಡ್ ಯೀಲ್ಡ್ ಶೇ. 7.1469ಕ್ಕೆ ಇಳಿದಿದೆ. ಇಲ್ಲಿ ಬಾಂಡ್ ಯೀಲ್ಡ್ ಎಂದರೆ ಹೂಡಿಕೆಗೆ ಪ್ರತಿಯಾಗಿ ಸಿಗುವ ರಿಟರ್ನ್. ಇಲ್ಲಿ ಬಾಂಡ್ ಮೌಲ್ಯ ಹೆಚ್ಚಿದಷ್ಟೂ ಅದರ ಯೀಲ್ಡ್ ಕಡಿಮೆ ಆಗುತ್ತದೆ.

ರೆಪೋ ದರ ಎಂದರೇನು? : ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೋ ದರವಾಗಿದೆ.