ರೈಲು ನಿಲ್ದಾಣದ ಗೂಡ್ಸ್ ಶೆಡ್‍ನಲ್ಲಿ ಸರಕು ಸಾಗಾಣಿಕೆಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸುವಂತೆ ಒತ್ತಾಯ…

114
firstsuddi

ಚಿಕ್ಕಮಗಳೂರು: ನಗರದ ರೈಲು ನಿಲ್ದಾಣದಲ್ಲಿರುವ ರೈಲು ಗೂಡ್ಸ್ ಶೆಡ್‍ನಲ್ಲಿ ಸರಕು ಸಾಗಾಣಿಕೆ ಲಾರಿಗಳ ಚಾಲಕರು ಮತ್ತು ಮಾಲೀಕರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸುವಂತೆ ರೈಲ್ವೇ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರನ್ನು ಇಂದು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ರೈಲು ನಿಲ್ದಾಣದಲ್ಲಿರುವ ಗೂಡ್ಸ್ ಶೆಡ್‍ನಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ ಇದರಿಂದಾಗಿ ಲಾರಿ ಚಾಲಕರು ಮತ್ತು ಮಾಲೀಕರು ಪರದಾಡುವಂತಾಗಿದೆ ಎಂದರು.

ರೈಲು ನಿಲ್ದಾಣದ ಗೂಡ್ಸ್ ಶೆಡ್‍ನಲ್ಲಿ ಸರಕು ಸಾಗಾಣಿಕೆ ಲಾರಿಗಳನ್ನು ನಿಲ್ಲಿಸಲು ನಿಲ್ದಾಣವಿಲ್ಲ. ಹಾಗಾಗಿ ಲಾರಿಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗುತ್ತಿದೆ. ಈ ವೇಳೆ ಲಾರಿಯಲ್ಲಿರುವ ವಸ್ತುಗಳ ಕಳ್ಳತನವಾಗುತ್ತಿದೆ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣದ ಗೂಡ್ಸ್ ಶೆಡ್‍ನಲ್ಲಿ ಸರಕು ಸಾಗಾಣಿಕೆ ಲಾರಿ ನಿಲ್ದಾಣವನ್ನು ನಿರ್ಮಿಸಬೇಕು. ಲಾರಿಗಳಲ್ಲಿರುವ ವಸ್ತುಗಳ ಕಳ್ಳತನವಾಗದಂತೆ ಭದ್ರತಾ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ರೈಲ್ವೇ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಇಮ್ರಾನ್ ಹುಸೇನ್, ಪದಾಧಿಕಾರಿಗಳಾದ ಯೂನೂಸ್, ಮುಬಾರಕ್, ಎಂ.ಡಿ. ಶಫೀಕ್ ಹಾಜರಿದ್ದರು.