ಧನ್ಬಾದ್ (ಜಾರ್ಖಂಡ್) : ರೈಲ್ವೆ ಹಳಿಗಳ ಮೇಲೆ ಬಾಂಬ್ ಸ್ಫೋಟವಾಗಿದ್ದು, ಡೀಸೆಲ್ ಲೊಕೋಮೋಟಿವ್ ಹಳಿ ತಪ್ಪಿದೆ . ಜಾರ್ಖಂಡ್ ನ ಧನ್ಬಾದ್ ವಿಭಾಗದ ಗರ್ವಾ ರಸ್ತೆ ಮತ್ತು ಬರ್ಕಾನಾ ನಡುವೆ ಡೀಸೆಲ್ ಲೊಕೋಮೋಟಿವ್ ಚಲಿಸುತ್ತಿದ್ದ ವೇಳೆ ಬಾಂಬ್ ಸ್ಫೋಟಿಸಿದೆ. ರೈಲು ಹಳಿಯ ಒಂದು ಭಾಗವು ಸ್ಫೋಟಗೊಂಡಿದೆ ಎಂದು ರೈಲ್ವೆ ಇಲಾಖೆ ಖಚಿತಪಡಿಸಿದೆ.
ರೈಲ್ವೆ ಹಳಿ ಮೇಲೆ ನಡೆದ ಸ್ಫೋಟದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ನಕ್ಸಲರ ಕೈವಾಡದಿಂದ ಸ್ಫೋಟ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.










