ರೋಲ್ಸ್ ರಾಯ್ಸ್ ಕಾರು-ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ; ಟ್ಯಾಂಕರ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು…

69
firstsuddi

ಹರಿಯಾಣ: ಗುರುಗ್ರಾಮದ ಬಳಿ ದೆಹಲಿ-ಮುಂಬೈ-ಬರೋಡಾ ಎಕ್ಸ್​ಪ್ರೆಸ್​ವೇನಲ್ಲಿ ರೋಲ್ಸ್ ರಾಯ್ಸ್ ಕಾರು ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿತ್ತು. ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು, ಟ್ಯಾಂಕರ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಿನ್ನೆ ಮಧ್ಯಾಹ್ನದ ವೇಳೆಗೆ ನಗೀನಾ ಪೊಲೀಸ್ ಠಾಣಾ ವ್ಯಾಪ್ತಿಯ ಉಮ್ರಿ ಗ್ರಾಮದ ಬಳಿ ರಾಂಗ್ ಸೈಡ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ಯಾಂಕರ್, ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ಯಾಂಕರ್ ಡಿಕ್ಕಿಯಾದ ಬೆನ್ನಲ್ಲೇ ರೋಲ್ಸ್ ರಾಯ್ಸ್ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಇನ್ನು ರೋಲ್ಸ್ ರಾಯ್ಸ್ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಈ ಪ್ರಯಾಣಿಕರ ಸಂಬಂಧಿಕರು ಮತ್ತೊಂದು ಕಾರಿನಲ್ಲಿ ಇದರ ಹಿಂದೆ ಪ್ರಯಾಣಿಸುತ್ತಿದ್ದರು.

ಹಿಂದಿನ ಕಾರಿನಲ್ಲಿದ್ದ ಸಂಬಂಧಿಕರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಕಾರಿನೊಳಗಿಂದ ಮೂವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಣ್ಣ ಪುಟ್ಟ ಗಾಯಗೊಂಡಿರುವ ರೋಲ್ಸ್ ರಾಯ್ಸ್ ಕಾರಿನ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇನ್ನು ಟ್ಯಾಂಕರ್​ನಲ್ಲಿದ್ದ ಡ್ರೈವರ್ ರಾಮಪ್ರೀತ್ ಮತ್ತು ಆತನ ಸಹಾಯಕ ಕುಲದೀಪ್ ಮೃತಪಟ್ಟ ದುರ್ದೈವಿಗಳಾಗಿದ್ದು, ಇಬ್ಬರೂ ಉತ್ತರ ಪ್ರದೇಶದ ನಿವಾಸಿಗಳಾಗಿದ್ದಾರೆ.

ರೋಲ್ಸ್ ರಾಯ್ಸ್ ಅತ್ಯಂತ ಸುರಕ್ಷತಾ ಫೀಚರ್ಸ್ ಹೊಂದಿರುವ ಕಾರು. 7 ಏರ್‌ಬ್ಯಾಗ್, 5 ಸ್ಟಾರ್ ಕ್ರಾಶ್ ರೇಟಿಂಗ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಕಾರಿನ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸುತ್ತದೆ. ಸಾಮಾನ್ಯವಾಗಿ ಟ್ಯಾಂಕರ್ ಯಾವುದೇ ಕಾರು ಅಥವಾ ಸಣ್ಣ ವಾಹನಕ್ಕೆ ಡಿಕ್ಕಿಯಾದರೆ ವಾಹನಗಳು ಪುಡಿ ಪುಡಿಯಾಗಲಿದೆ. ರೋಲ್ಸ್ ರಾಯ್ಸ್ ಐಷಾರಾಮಿ ಹಾಗೂ ದುಬಾರಿ ಕಾರು. ಜೊತೆಗೆ ಸುರಕ್ಷತಾ ಫೀಚರ್ಸ್ ಹೊಂದಿರುವ ಕಾರಣ ಕಾರಿನ ಪ್ರಯಾಣಿಕರು ಸೇಫ್ ಆಗಿದ್ದಾರೆ.