ಲಂಡನ್‍ ಗಿಫ್ಟ್ ಆಸೆಗೆ 4.49 ಲಕ್ಷ ರೂ. ಕಳೆದುಕೊಂಡ್ರು!

73
firstsuddi

ಹುಬ್ಬಳ್ಳಿ : ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ಉಡುಗೊರೆ ಹೆಸರಿನಲ್ಲಿ ಧಾರವಾಡದ ರಾಮನಗರ ನಿವಾಸಿ ರಾಜಶೇಖರ್ ನವಲೂರ ಎಂಬುವವರಿಗೆ 4.49 ಲಕ್ಷ ರೂ. ವಂಚಿಸಿದ್ದಾನೆ.

ರಾಜಶೇಖರ್ ಅವರ ತಾಯಿಯ ಫೇಸ್ ಬುಕ್ ಖಾತೆಯಿಂದ ಪರಿಚಯವಾದ ವ್ಯಕ್ತಿ, ಲಂಡನ್ ನಿಂದ ಗಿಫ್ಟ್ ಬಂದಿದೆ, ವಿದೇಶಿ ಹಣ ಭಾರತದ ರೂಪಾಯಿಗೆ ಬದಲಾಯಿಸಲು, ತೆರಿಗೆ ಹಾಗೂ ಇತರ ಶುಲ್ಕ ಕಟ್ಟ ಬೇಕು ಎಂದು ನಂಬಿಸಿದ್ದಾನೆ. ಈ ಹಿನ್ನೆಲೆ ರಾಜಶೇಖರ್ ಅವರು ಬ್ಯಾಂಕ್ ಖಾತೆ, ಫೋನ್ ಪೇ ಮೂಲಕ ಹಣವನ್ನು ವರ್ಗಾಯಿಸಿದ್ದಾರೆ. ಆದರೆ ಹಣ ಸಂಪೂರ್ಣವಾಗಿ ಕಟ್ಟಿದ ನಂತರ ವ್ಯಕ್ತಿ ರಾಜಶೇಖರ್ ಕರೆಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಇದ್ದಾಗ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದೆ.

ಈ ಬಗ್ಗೆ ರಾಜಶೇಖರ್ ಹುಬ್ಬಳ್ಳಿಯ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.