ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಮೋದಿ.

47
firstsuddi

ಮುಂಬೈ : ಪ್ರಧಾನಿ ಮೋದಿಯವರಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಂಬೈನಲ್ಲಿ ನಿನ್ನೆ 80ನೇ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶ ಹಾಗೂ ಸಮಾಜಕ್ಕಾಗಿ ದುಡಿದ ಸೇವೆಗಾಗಿ ಮೊದಲ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ಈ ಸಂಗೀತದ ಶಕ್ತಿಯನ್ನು ಲತಾ ದೀದಿಯ ರೂಪದಲ್ಲಿ ಕಂಡ ನಾವೆಲ್ಲರೂ ಅದೃಷ್ಟವಂತರು. ಸಂಗೀತಕ್ಕೆ ವಿಶೇಷವಾದ ಶಕ್ತಿ ಇದೆ. ಸಂಗೀತವು ಮಾತೃತ್ವ ಮತ್ತು ಪ್ರೀತಿಯ ಭಾವನೆಯನ್ನು ನೀಡುತ್ತದೆ. ಸಂಗೀತವು ನಿಮ್ಮನ್ನು ದೇಶಭಕ್ತಿಯೆಡೆಗೆ ಕೊಂಡೊಯ್ಯವ ಮಹಾಶಕ್ತಿ ಹೊಂದಿದೆ. ಲತಾ ದೀದಿಯನ್ನು ಜನ ತಾಯಿ ಸರಸ್ವತಿಯ ಪ್ರತಿರೂಪವೆಂದು ಕಂಡಿದ್ದರು. ಲತಾ ದೀದಿ ಜನರಿಗೆ ಸೇರಿದ ಹಾಗೆ ಅವರ ಹೆಸರಿನಲ್ಲಿ ನನಗೆ ನೀಡಿರುವ ಈ ಪ್ರಶಸ್ತಿ ಜನತೆಗೆ ಅರ್ಪಿಸುತ್ತೇನೆ ಎಂದು ನುಡಿದರು.