‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ದುರಂತ – ಐವರ ವಿರುದ್ಧ ಕೇಸ್ ದಾಖಲು…

76
firstsuddi

ಬೆಂಗಳೂರು : ನಿನ್ನೆ ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ (28) ಹೈ ಟೆನ್ಷನ್ ವೈಯರ್ ತಗುಲಿ ಮೃತಪಟ್ಟಿದ್ದರು. ಈ ಸಂಬಂಧ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಇದೀಗ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲವ್ ಯೂ ರಚ್ಚು ಚಿತ್ರದ ನಿರ್ದೇಶಕ ಶಂಕರ ರಾಜ್, ನಿರ್ಮಾಪಕ ಗುರು ದೇಶಪಾಂಡೆ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಚಿತ್ರದ ಉಸ್ತುವಾರಿ ಫರ್ನಾಂಡಿಸ್ ಹಾಗೂ ಕ್ರೇನ್ ಅಪರೇಟರ್ ಮಹದೇವ್ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.