ಲಿಫ್ಟ್ ಗುಂಡಿಗೆ ಬಿದ್ದು 6 ವರ್ಷದ ಬಾಲಕಿ ಸಾವು…

48
firstsuddi

ಬೆಂಗಳೂರು : ನಿರ್ಮಾಣದ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಗರದ ಸುಲ್ತಾನ್ ಪೇಟೆ ಬಳಿ ತಡರಾತ್ರಿ ನಡೆದಿದೆ.

ಮಹೇಶ್ವರಿ(6) ಮೃತ ಬಾಲಕಿ. ಈಕೆ ಪೋಷಕರು ಕಟ್ಟಡ ಕಾಮಗಾರಿಗಾಗಿ ಬಂದಿದ್ದರು. ಬಾಲಕಿ ಆಟವಾಡುತ್ತಾ ಲಿಫ್ಟ್ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಕಟ್ಟಡವು ವಿಕ್ರಮ್ ಎಂಬುವವರಿಗೆ ಸೇರಿದ್ದಾಗಿದ್ದು, ಬಿಬಿಎಂಪಿ 5 ಮಹಡಿಗಳಿಗಷ್ಟೇ ಅನುಮತಿ ನೀಡಿತ್ತು. ಆದರೆ ಕಟ್ಟಡದ ಮಾಲೀಕ ನಿಯಮ ಉಲ್ಲಂಘಿಸಿ 6 ಮಹಡಿಗೆ ಏರಿಸಿದ್ದಾನೆ. ಲಿಫ್ಟ್ ಗುಂಡಿಯಲ್ಲಿ ನೀರು ನಿಂತರೂ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.