ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಸಂಸದ ಇಮ್ರಾನ್ ವಿರುದ್ಧ ಆರೋಪ.

32

ಉತ್ತರಪ್ರದೇಶ: 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಉತ್ತರಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಈಗ ವಿವಾದಕ್ಕೆ ಸಿಲುಕಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಸಹಾರನ್ ಪುರಕ್ಕೆ ಬಂದರೆ ಅವರನ್ನು ತುಂಡು ತುಂಡು ಮಾಡಲಾಗುವುದು ಎಂದು ಇಮ್ರಾನ್ ಮಸೂದ್ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಈ ಪ್ರಕರಣದಲ್ಲಿ ಗ್ರಾಮಸ್ಥರ ಹೇಳಿಕೆಗಳನ್ನು ದಾಖಲಿಸಿದ ನಂತರ, ಸಹಾರನ್ ಪುರದ ಜನಪ್ರತಿನಿಧಿಗಳ ನ್ಯಾಯಾಲಯವು ಇಮ್ರಾನ್ ಮಸೂದ್ ವಿರುದ್ಧ ಆರೋಪವನ್ನು ಹೇರಿದೆ.
ಈ ಆರೋಪಗಳನ್ನು ಕೇಳಿದ ಸಂಸದ ಇಮ್ರಾನ್ ಮಸೂದ್ ಮತ್ತು ಅವರ ಬೆಂಬಲಿಗರಲ್ಲಿ ನಡುಕ ಉಂಟಾಗಿದೆ. ಇಮ್ರಾನ್ ಮಸೂದ್ ತಾವು ಹೇಳಿರುವ ಆ ಹೇಳಿಕೆಗೆ ಈಗಾಗಲೇ ಅನೇಕ ಬಾರಿ ಕ್ಷಮೆಯಾಚಿಸಿದ್ದಾರೆ. ಆ ಘಟನೆ ನಡೆದ 10 ವರ್ಷಗಳ ನಂತರ, ನ್ಯಾಯಾಲಯದಲ್ಲಿ ಇವರ ವಿರುದ್ಧ ಆರೋಪಗಳನ್ನು ದಾಖಲಿಸಲಾಗಿದೆ. ನಂತರ ಸಚಿವ ಇಮ್ರಾನ್‍ಗೆ ಆತಂಕ ಶುರುವಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪರವಾಗಿ ಸಹಾರನ್ ಪುರ ಲೋಕಸಭಾ ಸ್ಥಾನದಿಂದ ಚುನಾವಣೆಯಲ್ಲಿ ವಿಜಯಶಾಲಿಯಾಗಿರುವ ಇಮ್ರಾನ್ ಮಸೂದ್, 10 ವರ್ಷಗಳ ಹಿಂದೆ ಅಂದರೆ 2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಥಾನಾ ದಿಯೋಬಂದ್ ಪ್ರದೇಶದ ಲಬ್ಕರಿ ಗ್ರಾಮದಲ್ಲಿ ಮೋದಿ ಅವರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಗುಜರಾತ್‍ನಲ್ಲಿ ಶೇ.4 ಮತ್ತು ಸಹಾರನ್ ಪುರದಲ್ಲಿ ಶೇ 42 ರಷ್ಟು ಮುಸ್ಲಿಮರಿದ್ದಾರೆ. ಅವರು ಇಲ್ಲಿಗೆ ಬಂದರೆ ಅವರನ್ನು ತುಂಡು ತುಂಡಾಗಿ ಕತ್ತರಿಸಲಾಗುವುದು ಎಂದು ಇಮ್ರಾನ್ ಮಸೂದ್ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ ಇಮ್ರಾನ್ ಮಸೂದ್ ಇಬ್ಬರು ಬಿಎಸ್‍ಪಿ ಶಾಸಕರ ಬಗ್ಗೆಯೂ ಅಸಭ್ಯ ಹೇಳಿಕೆ ನೀಡಿದ್ದಾರೆ. ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ, ಶಾಂತಿಯನ್ನು ಕದಡಲು ಪ್ರಯತ್ನಿಸಿದ ಮತ್ತು ಪರಿಶಿಷ್ಟ ಜಾತಿ ಶಾಸಕರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಸಂಸದರ ವಿರುದ್ಧ 2014 ರಂದು ಆಗಿನ ಕೊತ್ವಾಲಿ ದೇವಬಂದ್ ಎಫ್ಐಆರ್ ದಾಖಲಿಸಲಾಗಿದೆ.