ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ ; ಇಂದಿನಿಂದ ಪರಿಷ್ಕೃತ ದರ ಜಾರಿ…

62
firstsuddi

ನವದೆಹಲಿ : ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಗಳ ಬೆಲೆಯನ್ನು 25.50 ರೂಪಾಯಿ ಇಳಿಸಿ ತೈಲ ವಿತರಣಾ ಕಂಪನಿಗಳು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

ಭಾರತೀಯ ತೈಲ ಪ್ರಾಧಿಕಾರದ ಅಧಿಸೂಚನೆ ಪ್ರಕಾರ, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ದರ ಇಳಿಕೆಯಿಂದಾಗಿ ದೆಹಲಿಯಲ್ಲಿ 19 ಕೆಜಿ ಎಲ್​ಪಿಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,859 ರೂಪಾಯಿಯಾಗಲಿದೆ. ಈ ಹಿಂದೆ ಅಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,885 ರೂಪಾಯಿ ಇತ್ತು.

ಕೋಲ್ಕತ್ತಾದಲ್ಲಿ 1,959 ರೂಪಾಯಿ, ಮುಂಬೈನಲ್ಲಿ 1,811.50 ರೂ. ಮತ್ತು ಚೆನ್ನೈನಲ್ಲಿ 2,009.50 ರೂ. ಇರಲಿದೆ. ಕಳೆದ ತಿಂಗಳು ಸೆಪ್ಟೆಂಬರ್ 1ರಂದು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಇಳಿಸಲಾಗಿತ್ತು. ಆದರೆ, ಗೃಹ ಬಳಕೆ ಎಲ್​ಪಿಜಿ ಸಿಲಿಂಡರ್ ನಲ್ಲಿ ಯಾವುದೇ ದರ ಬದಲಾವಣೆ ಮಾಡಲಾಗಿಲ್ಲ.