ನವದೆಹಲಿ : ವಾಣಿಜ್ಯ ಸಿಲಿಂಡರ್ ಗಳ ಬೆಲೆ 198 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಇಂದಿನಿಂದ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2021 ರೂ. ಆಗಿದೆ. ಈ ಮುನ್ನ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 2,219 ರೂ. ಆಗಿತ್ತು.
ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 190.50 ರೂಪಾಯಿ ಇಳಿಕೆಯಾಗಿದೆ. ಚೆನ್ನೈನಲ್ಲಿ ಸಿಲಿಂಡರ್ ಗಳ ಬೆಲೆ 187 ರೂಪಾಯಿ ಇಳಿಕೆಯಾದರೆ, ಕೋಲ್ಕತ್ತಾದಲ್ಲಿ ಈ ಸಿಲಿಂಡರ್ ಬೆಲೆ 182 ರೂಪಾಯಿ ಇಳಿಕೆಯಾಗಿದೆ. ಆದರೆ, ಗೃಹಬಳಕೆಯ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.










