ವಾಹನ ಸವಾರರಿಗೆ ದೀಪಾವಳಿ ಗಿಫ್ಟ್ – ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ…

69
firstsuddi

ಬೆಂಗಳೂರು : ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಇಂದಿನಿಂದ ರಾಜ್ಯದಲ್ಲಿ ಹೊಸ ದರ ಜಾರಿಯಾಗಲಿದೆ.

ನಿನ್ನೆ ಕೇಂದ್ರ ಸರ್ಕಾರ ಪೆಟ್ರೋಲ್ ದರದಲ್ಲಿ 5 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರದಲ್ಲಿ 10 ರೂಪಾಯಿ ಇಳಿಕೆ ಮಾಡಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 7 ರೂಪಾಯಿಯಷ್ಟು ಕಡಿಮೆ ಮಾಡಿತ್ತು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮಾಡಿ ನಾಳೆ ಸಂಜೆಯಿಂದ ಈ ದರ ಜಾರಿಯಾಗಲಿದೆ ಎಂದು ತಿಳಿಸಿದ್ದರು.

ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ಲೀಟರ್ ಪೆಟ್ರೋಲ್ ದರ 110 ರೂಪಾಯಿ ಆಗಿದ್ದರೆ ಲೀಟರ್ ಡೀಸೆಲ್ ದರ 105 ರೂಪಾಯಿ ಇತ್ತು. ಅಬಕಾರಿ ಸುಂಕ ಕಡಿತದಿಂದ ಲೀಟರ್ ಪೆಟ್ರೋಲ್ ದರ 105 ರೂಪಾಯಿಗೆ ಹಾಗೂ ಲೀಟರ್ ಡೀಸೆಲ್ ದರ 88.04 ರೂಪಾಯಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 113.93 ರೂಪಾಯಿ ಇದ್ದು,ಇಳಿಕೆಯಿಂದ ಲೀಟರ್ ಪೆಟ್ರೋಲ್ ಬೆಲೆ ಸುಮಾರು 95.50 ರೂಪಾಯಿಗೆ ಇಳಿಕೆ ಆಗಲಿದೆ. ಅದೇ ರೀತಿ ಲೀಟರ್ ಡೀಸೆಲ್ ದರ 104.50 ರೂಪಾಯಿ ಇದ್ದು, ಲೀಟರ್ ಡೀಸೆಲ್ ದರ 81.50 ರೂಪಾಯಿಗೆ ಇಳಿಕೆ ಆಗಲಿದೆ.