ವಿದ್ಯುತ್ ಪ್ರವಹಿಸಿ ಗರ್ಭಿಣಿ ಮಹಿಳೆ ಸೇರಿ ಇಬ್ಬರು ಸಾವು…

239
firstsuddi

ಬಳ್ಳಾರಿ : ವಿದ್ಯುತ್ ಪ್ರವಹಿಸಿ ಗರ್ಭಿಣಿ ಸೇರಿದಂತೆ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಗ್ರಾಮದಲ್ಲಿ ನಡೆದಿದೆ. ಮಂಜಮ್ಮ(35) ಹಾಗೂ ಮಾಬುನ್ನಿ(21) ಮೃತ ಗರ್ಭಿಣಿ ಎಂದು ಗುರುತಿಸಲಾಗಿದ್ದು, ಗರ್ಭಿಣಿಯಾಗಿದ್ದ ಮಾಬುನ್ನಿ ಅವರು  ತಮ್ಮ ಮನೆಯ ಆವರಣದಲ್ಲಿ ಬಟ್ಟೆಯನ್ನು ಒಣಹಾಕುವ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಾಬುನ್ನಿ ಅವರು ಕೆಳಗೆ ಬಿದ್ದಿದ್ದನ್ನು ಗಮನಿಸಿದ ಮಂಜಮ್ಮ ಅವರು ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲು ಆಟೋವನ್ನು ಕರೆಸಿ ಬಳಿಕ ಅವರ ಬಳಿ ಇದ್ದ ಬಟ್ಟೆಯನ್ನು ತಾನು ಒಣ ಹಾಕಲು ಮುಂದಾಗಿದ್ದು, ಈ ವೇಳೆ ಮಂಜಮ್ಮ ಅವರಿಗೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.