ವಿಭಿನ್ನ ಕಲಾಕೃತಿ ಮೂಲಕ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭ ಕೋರಿದ ಗೂಗಲ್ ಡೂಡಲ್.

46
firstsuddi

ನವದೆಹಲಿ : ಭಾರತವು ಇಂದು 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಗೂಗಲ್ ತನ್ನ ಡೂಡಲ್ ನಲ್ಲಿ ಎಲ್ಲಾ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ವಿಶೇಷವಾಗಿ ತಿಳಿಸಿದೆ.

ಗುಜರಾತ್ ನ ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಚಿಸಿದ ಕಾಗದದ ಕಲಾಕೃತಿಯ ವಿಡಿಯೋವನ್ನು ಗೂಗಲ್ ಹಂಚಿಕೊಂಡಿದೆ. 1950ರಲ್ಲಿ ಈ ದಿನದಂದು ಸಂವಿಧಾನದ ಅಂಗೀಕಾರದೊಂದಿಗೆ ಭಾರತವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ಎಂದು ಘೋಷಿಸಿಕೊಂಡಿತು. ಈ ಶುಭದಿನವನ್ನು ಗೂಗಲ್ ಡೂಡಲ್ ಕೂಡ ನೆನಪಿಸಿಕೊಂಡು ದೇಶದ ಜನತೆಗೆ ಶುಭಕೋರಿದೆ.

ಕಲಾಕೃತಿಯಲ್ಲೇನಿದೆ?
ಗೂಗಲ್ ತನ್ನ ಮುಖಪುಟದಲ್ಲಿ ಹಂಚಿಕೊಂಡ ಕಲಾಕೃತಿಯನ್ನು ಕೈಗಳಿಂದ ಕತ್ತರಿಸಿದ ಕಾಗದದಿಂದ ರಚಿಸಲಾಗಿದೆ. ಇದರಲ್ಲಿ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್‌ಎಫ್‌ಪಿ ಕವಾಯತು ತಂಡ ಮತ್ತು ಮೋಟಾರ್‌ ಸೈಕ್ಲಿಸ್ಟ್‌ ಗಳು ಸೇರಿದಂತೆ ಗಣರಾಜ್ಯೋತ್ಸವದ ಪರೇಡ್ ನ ಹಲವಾರು ಅಂಶಗಳನ್ನು ಕಾಣಬಹುದು.