ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ ; ದೆಹಲಿಗೆ ವಾಪಸ್

59
firstsuddi

ನವದೆಹಲಿ: ದೆಹಲಿಯಿಂದ ಜಬಲ್ ಪುರಕ್ಕೆ ಹೊರಟ್ಟಿದ್ದ ಸ್ಪೈಸ್ ಜೆಟ್ ವಿಮಾನದ ಕ್ಯಾಬಿನ್ ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ವಿಮಾನವು ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ.

ಇಂದು ಬೆಳಗ್ಗೆ ದೆಹಲಿ ನಿಲ್ದಾಣದಿಂದ ಜಬಲ್ ಪುರಕ್ಕೆ ವಿಮಾನ ಹಾರಾಟ ಮಾಡಿತ್ತು. ವಿಮಾನವು 5,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವೇಳೆ ಸಿಬ್ಬಂದಿ ಕ್ಯಾಬಿನ್ ಒಳಗೆ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಸದ್ಯ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ. ಇದೀಗ ವಿಮಾನದಲ್ಲಿ ಹೊಗೆ ಬರುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.