ಪಣಜಿ : ಕಳೆದ ಎರಡು ವಾರದ ಹಿಂದೆ ಅಷ್ಟೇ ವಿವಾಹವಾಗಿದ್ದ ಬಾಲಿವುಡ್‍ನ ಹಾಟ್ ನಟಿ ಪೂನಂ ಪಾಂಟೆ ತನ್ನ ಪತಿಯ ವಿರುದ್ಧವೇ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ನಟಿ ಪೂನಂ ಪಾಂಡೆ ಅವರು ಸೆ. 11ರಂದು ತಮ್ಮ ಗೆಳೆಯ ಸ್ಯಾಮ್ ಬಾಂಬ್ ಅವರೊಂದಿಗೆ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈಗಾ ನಟಿ ತನ್ನ ಪತಿಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಚಿತ್ರೀಕರಣದ ನಿಮಿತ್ತ ನಟಿ ಪೂನಂ ಪಾಂಡೆ ಗೋವಾದ ಕೆನಕೋನಾದಲ್ಲಿದ್ದು, ಈ ವೇಳೆ ಅಲ್ಲಿಗೆ ತೆರಳಿದ ಪತಿ ಸ್ಯಾಮ್ ಬಾಂಬೆ ನಟಿ ಪೂನಂ ಪಾಂಡೆ ಮೇಲೆ ಹಲ್ಲೆ ಮಾಡಿ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ಪತಿ ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದಾರೆ.










