ವರ್ಕ್ ಫ್ರಮ್ ಹೋಂ – ಕೇಂದ್ರದಿಂದ ಹೊಸ ನಿಯಮ ಜಾರಿ…

70
firstsuddi

ನವದೆಹಲಿ : ವಿಶೇಷ ಆರ್ಥಿಕ ವಲಯ ಘಟಕಗಳಲ್ಲಿ ಗರಿಷ್ಠ ಒಂದು ವರ್ಷದ ಅವಧಿಗೆ ಮನೆಯಿಂದ ಕೆಲಸ ಮಾಡಲು (WFH) ಅವಕಾಶ ನೀಡಬಹುದು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ. ಎಲ್ಲಾ ಆರ್ಥಿಕ ವಲಯಗಳಲ್ಲಿ ದೇಶಾದ್ಯಂತ ಏಕರೂಪದ ವರ್ಕ್ ಫ್ರಮ್ ಹೋಮ್ ನೀತಿಯನ್ನು ಪರಿಚಯಿಸುವ ಉದ್ದೇಶದಿಂದ ಈ ಅಧಿಸೂಚನೆಯನ್ನು ಹೊರಡಿಸಿದೆ.

ವಾಣಿಜ್ಯ ಇಲಾಖೆಯು ವಿಶೇಷ ಆರ್ಥಿಕ ವಲಯಗಳ ನಿಯಮ -2006 ರಲ್ಲಿ ವರ್ಕ್ ಫ್ರಮ್ ಹೋಮ್ ಗಾಗಿ ಹೊಸ ನಿಯಮ 43ಎ ಅನ್ನು ಅನುಷ್ಠಾನಗೊಳಿಸಲು ಸೂಚಿಸಿದೆ. ಘಟಕದಲ್ಲಿರುವ ಗುತ್ತಿಗೆ ನೌಕರರು ಸೇರಿದಂತೆ ಒಟ್ಟು ಉದ್ಯೋಗಿಗಳಲ್ಲಿ ಗರಿಷ್ಠ ಶೇಕಡಾ 50 ರಷ್ಟು ಉದ್ಯೋಗಿಗಳಿಗೆ WFH ಅನ್ನು ವಿಸ್ತರಿಸಬಹುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಪ್ರಸ್ತುತ ಗರಿಷ್ಠ ಒಂದು ವರ್ಷಕ್ಕೆ WFH ನೀಡಬಹುದು ಹಾಗೂ ಅದರ ನಂತರ ಆಯಾ ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಅದನ್ನು ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಿಸಬಹುದು ಎಂದು ತಿಳಿಸಲಾಗಿದೆ. ಹೊಸ ನಿಯಮಗಳು IT/ITeS SEZ ವಲಯದ ಉದ್ಯೋಗಿಗಳಿಗೆ ಕೂಡ ಅನ್ವಯಿಸಲಿವೆ. ಕೆಲಸ ಮಾಡಲು ತಾತ್ಕಾಲಿಕವಾಗಿ ಅಸಮರ್ಥರಾಗಿರುವ ನೌಕರರು, ಪ್ರಯಾಣದಲ್ಲಿರುವ ಉದ್ಯೋಗಿಗಳು ಮತ್ತು ಆಫ್​ಸೈಟ್ ಉದ್ಯೋಗಿಗಳಿಗೆ ಸಹ WFH ಹೊಸ ನಿಯಮಗಳು ಅನ್ವಯಿಸಲಿವೆ.