ಮುಂಬೈ : ಭಾರತದ ದಿಗ್ಗಜ ಉದ್ಯಮಿ ಗೌತಮ್ ಅದಾನಿ ಇದೀಗ ವಿಶ್ವದಲ್ಲೇ 3ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಶ್ರೀಮಂತ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದಾನಿ ಗ್ರೂಪ್ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಫ್ರಾನ್ಸ್ ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನೂ ಹಿಂದಿಕ್ಕಿದ್ದಾರೆ. ಅದಾನಿ ನಿವ್ವಳ ಆಸ್ತಿ ಈಗ 137.4 ಬಿಲಿಯನ್ ಡಾಲರ್ (10.97 ಲಕ್ಷ ಕೋಟಿ) ತಲುಪಿದೆ .ಏಷ್ಯಾದ ವ್ಯಕ್ತಿಯೊಬ್ಬರು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮೊದಲ 3 ಸ್ಥಾನಗಳಿಗೆ ಪ್ರವೇಶಿಸಿರುವುದು ಇದೇ ಮೊದಲು.
ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್(19 ಲಕ್ಷ ಕೋಟಿ ರೂ.), ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್(12.5 ಲಕ್ಷ ಕೋಟಿ ರೂ.) ಬಳಿಕದ ಸ್ಥಾನವನ್ನು ಅದಾನಿ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾದ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ 91.9 ಬಿಲಿಯನ್ ಡಾಲರ್ ಆಸ್ತಿ ಮೂಲಕ 11ನೇ ಸ್ಥಾನದಲ್ಲಿದ್ದಾರೆ.










